Header Ads
Header Ads
Header Ads
Breaking News

ರಕ್ತದಾನ ಅತ್ಯಂತ ಶ್ರೇಷ್ಠ ದಾನ ರಕ್ತದಾನ ಮಾಡಿ ಕತ್ತಲೆ ತುಂಬಿದ ಜೀವಕ್ಕೆ ಬೆಳಕಾಗಿ ಸಿ‌ಎಸ್‌ಐ ಚರ್ಚ್‌ನ ಸಭಾಪಾಲ ರೆಬೆಸ್ಟಿನ್ ಜತ್ತನ್ ಹೇಳಿಕೆ

ಅನ್ನದಾನ, ವಿದ್ಯಾದಾನದಂತೆ ರಕ್ತದಾನ ಅತ್ಯಂತ ಶ್ರೇಷ್ಟ ದಾನವಾಗಿದೆ, ರಕ್ತದಾನ ಅನೇಕರ ಜೀವ ಉಳಿಸುವ ಮೂಲಕ ಕಣ್ಣೋರೆತ್ತದೆ, ರಕ್ತವಿಲ್ಲದೆ ಯಾವುದೇ ಜೀವ ಬದುಕಲು ಸಾದ್ಯವಿಲ್ಲ ಆದರಿಂದ ನಾವೆಲ್ಲರೂ ರಕ್ತ ದಾನ ಮಾಡುವ ಮೂಲಕ ಕತ್ತಲೆ ತುಂಬಿದ ಜೀವಕ್ಕೆ ಬೆಳಕಾಗುವ ಎಂದು ಹಳೆಯಂಗಡಿ ಸಿ.ಎಸ್.ಐ ಅಮ್ಮನ್ ಮೆಮೋರಿಯಲ್ ಚರ್ಚ್ ನ ಸಭಾಪಾಲ ರೆ.ಸೆಬೆಸ್ಟಿನ್ ಜತ್ತನ್ ಹೇಳಿದರು.

ಅವರು ಲಿಯೋ ಮತ್ತು ಲಯನ್ಸ್ ಕ್ಲಬ್ ಹಳೆಯಂಗಡಿ, ರೇ. ಜೋರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್ ಹಳೆಯಂಗಡಿ ಇವರ ಸಾರಥ್ಯದಲ್ಲಿ ಹೆಲ್ತ್ ಕೇರ್ ಡಯಾಗೋಸ್ಟಿಕ್ ಸೆಂಟರ್ ಹಾಗೂ ಕೆ.ಎಂ.ಸಿ ಅಸ್ಪತ್ರೆ ಮಂಗಳೂರು ಇದರ ಅಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಗಾಂಧೀ ಜಯಂತಿ ಪ್ರಯುಕ್ತ ಹಳೆಯಂಗಡಿಯ ಹರಿ ಒಂ ಅಪಾರ್ಟ್ ಮೆಂಟ್ ನ ಸಭಾಭವನದಲ್ಲಿ ರಕ್ತದಾನ ಶಿಬಿರವನ್ನು ಉದ್ಘಟಿಸಿ ಮಾತನಾಡಿದರು ಈ ಸಂದರ್ಭ ಹಳೆಯಂಗಡಿ ಪಂಚಾಯತ್ ಅಧ್ಯಕ್ಷೆ ಜಲಜ, ತಾಲೂಕು ಪಂಚಾಯತ್ ಸದಸ್ಯ ಜೀವನ್ ಪ್ರಕಾಶ್ ಕಾಮರೊಟ್ಟು, ಮೂಡ ಸದಸ್ಯ ವಸಂತ್ ಬೆರ್ನಾಡ್, ಜೋರ್ಜ್ ಎ. ಬೆರ್ನಾಡ್ ಮೆಮೋರಿಯಲ್ ಟ್ರಸ್ಟ್ ಜೋರ್ಜ್ ಬೆರ್ನಾಡ್, ಉದಯ ಬೆರ್ನಡ್ , ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ವಿದ್ಯಾವಿನಾಯಕ ಯುವಕ ಮಂಡಲದ ಕಟ್ಟಡ ಸಮಿತಿ ಗೌರಾವಾಧ್ಯಕ್ಷ ಪ್ರಕಾಶ್ ಶೆಟ್ಟಿ, ವಿವಿಧ ಸಂಘ ಸಂಸ್ಥೆಗಳ ಹರಿದಾಸ್ ಭಟ್ , ಬ್ರಿಜೇಶ್ , ರತನ್ ಶೆಟ್ಟಿ, ಎಚ್ ಅಮೀನ್, ಸುಜಾತ ವಾಸುದೇವ್, ದಿವ್ಯಶ್ರಿ, ಜೋತಿ , ಶಮೀನ್, ಶರತ್, ಚಂದ್ರಶೇಖರ ಕದಿಕೆ, ಅಜೀಜ್ ಹಳೆಯಂಗಡಿ ಮತ್ತಿತರರು ಇದ್ದರು.

Related posts

Leave a Reply