Header Ads
Header Ads
Header Ads
Breaking News

ರಫೀಕ್ ಅಹ್ಮದ್ ಸಂಶಯಾಸ್ಪದ ಸಾವು-ಉನ್ನತ ಮಟ್ಟದ ತನಿಖೆಗೆ ತುರವೇ ಒತ್ತಾಯ

ಕೊಳ್ತಿಗೆ ಗ್ರಾಮದ ಪಂಬಾರು ಸಮೀಪದ ಪಾರ್ಚೋಲು ಎಂಬಲ್ಲಿ ನವೆಂಬರ್ 10ರಂದು ಮಧ್ಯಾಹ್ನ ಮರ ಕಡಿಯುತ್ತಿದ್ದ ಮರದ ಕೊಂಬೆಯೊಂದು ಮೈಮೇಲೆ ಬಿದ್ದು ಮರ ಕಡಿಯಲು ಹೋಗಿದ್ದ ಕಾರ್ಮಿಕರೊಬ್ಬರು ಮೃತಪಟ್ಟರೆನ್ನಲಾದ ನಿಗೂಢ ಘಟನೆ ಸಂಬಂಧಿಸಿ ಸುಳ್ಯದ ಬೆಳ್ಳಾರೆ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ಮರ ಕಡಿದ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪುತ್ತೂರು ಅರಣ್ಯಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನಾಲ್ವರ ವಿರುದ್ಧ ಪ್ರಕರಣ ಪ್ರತ್ಯೇಕವಾಗಿ ದಾಖಲಾಗಿದೆ. ಈ ಸಾವಿನ ಬಗ್ಗೆ ಸಾರ್ವಜನಿಕರು ಹಲವಾರು ರೀತಿಯ ಸಂಶಯ ವ್ಯಕ್ತಪಡಿಸುತ್ತಿದ್ದು, ಈ ಸಾವಿನ ಸಮಗ್ರ ತನಿಖೆಗೆ ತುಳುನಾಡ ರಕ್ಷಣಾ ವೇದಿಕೆ ಒತ್ತಾಯಿಸುತ್ತದೆ.

ಸಾವಿಗೀಡಾದ ಕಾರ್ಮಿಕ ರಫೀಕ್ ಅಹ್ಮದ್ ರವರ ಕುಟುಂಬಕ್ಕೆ ಕನಿಷ್ಠ 25,00,000 ಕೂಡಲೇ ಪರಿಹಾರ ನೀಡಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಒತ್ತಾಯಿಸಿದ್ದಾರೆ. ತನಿಖೆ ವಿಳಂಬ ಹಾಗೂ ಪರಿಹಾರ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

Related posts

Leave a Reply

Your email address will not be published. Required fields are marked *