Header Ads
Breaking News

ರಸ್ತೆಯಲ್ಲಿ ಯುವಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ : ಕುಂಜತ್ತೂರು ಪದವಿನಲ್ಲಿ ನಡೆದ ಘಟನೆ

ಮಂಜೇಶ್ವರ: ಕುಂಜತ್ತೂರು ಪದವು ರಸ್ತೆಯಲ್ಲಿ ಯುವಕನೊಬ್ಬ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ. ಕರ್ನಾಟಕ ಗದಗ ನಿವಾಸಿ ಹನುಮಂತ (35) ಸಾವನ್ನಪ್ಪಿದ ದುರ್ದೈವಿ. ಕಳೆದ ಕೆಲವು ವರ್ಷಗಳಿಂದ ಮಂಗಳೂರು ಕೊಡಿಯಾಲ್ ಬೈಲ್ ವಿಶಾಲ್ ನರ್ಸಿಂಗ್ ಹೋಮ್ ಕ್ಯಾಂಟೀನೊಂದರಲ್ಲಿ ನೌಕರನಾಗಿ ಸೇವೆ ಸಲ್ಲಿಸುತ್ತಿರುವ ಈತ ಪತ್ನಿ ಭಾಗ್ಯ ಹಾಗೂ ಎರಡು ಮಕ್ಕಳೊಂದಿಗೆ ಕುಟುಂಬ ಸಮೇತನಾಗಿ ದೇವಿಪುರದ ಸಮೀಪ ವಾಸವಾಗಿದ್ದ ಎನ್ನಲಾಗಿದೆ.

ಹೊಸ ರಿಜಿಸ್ಟ್ರೇಶನ್ ನೋಂದಾಯಿತವಲ್ಲದ ಸ್ಕೂಟರ್ ಮಗುಚಿದ ಹಾಗೆ ಕಂಡು ಬಂದಿದ್ದರೂ ಸ್ಕೂಟರಿಗೆ ಅಷ್ಟೊಂದು ಹಾನಿಯಾದ ಬಗ್ಗೆ ಕಾಣುತಿಲ್ಲ. ಸ್ಕೂಟರಿನಿಂದ ಪಲ್ಟಿಯಾಗಿರಬಹುದಾ? ಅಥವಾ ಬೇರೆ ಯಾವುದಾದರು ವಾಹನ ಡಿಕ್ಕಿ ಹೊಡೆದಿರಬಹುದಾ ಅಥವಾ ಕೊಲೆಗೈದು ಬಿಸಾಡಿರಬಹುದಾ ಎಂದು  ಪೊಲೀಸ್ ತನಿಖೆಯಿಂದ ತಿಳಿಯಬೇಕಾಗಿದೆ. ಯುವಕನ ಶವ ಪತ್ತೆಯಾದ ಸ್ಥಳಕ್ಕೆ ಮಂಜೇಶ್ವರ ಠಾಣಾಧಿಕಾರಿ ರಾಘವನ್ ನೇತೃತ್ವದ  ಪೊಲೀಸ್ರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

Related posts

Leave a Reply

Your email address will not be published. Required fields are marked *