
ಮಂಗಳೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸ್ಸು ಚಾಲಕ ಕಿರಣ್ ಮುಡಿಪು ( ಸಂಜೀವ ನಾಯಕ್ ) ಅವರಿಗೆ ಪೂರ್ವ ವಲಯ ಬಸ್ಸು ನೌಕರರ ಸಂಘಟನೆಯಾದ ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ವತಿಯಿಂದ ಮೊದಲ ಹಂತದ ಪರಿಹಾರವಾಗಿ ರೂಪಾಯಿ ಮೂವತ್ತೊಂದು ಸಾವಿರವನ್ನು ಬಸ್ಸು ನೌಕರರ ಸಂಘದ ನಿಯೋಗ ಇಂದು ಆಸ್ಪತ್ರೆಗೆ ತೆರಳಿ ವಿತರಿಸಿತು.
ನಿಯೋಗದಲ್ಲಿ ರಾಣಿ ಅಬ್ಬಕ್ಕ ಬಸ್ಸು ನೌಕರರ ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷ ಅಲ್ತಾಫ್ ಮುಡಿಪು , ಕಾರ್ಯದರ್ಶಿ ಜಗದೀಶ್ ದೇರಳಕಟ್ಟೆ, ಪದಾಧಿಕಾರಿಗಳಾದ ನವಾಜ್ ದೇರಳಕಟ್ಟೆ, ಮುನೀರ್, ಬಾಜಿಕ್, ಡಿವೈಎಫ್ಐ ಜಿಲ್ಲಾ ಮುಖಂಡ ಶ್ರೀನಾಥ್ ಕುಳಾಯಿ ಉಪಸ್ಥಿತರಿದ್ದರು.