Header Ads
Breaking News

ರಸ್ತೆ ದಾಟುವ ವೇಳೆ ಮಹಿಳೆಗೆ ಬಸ್ ಢಿಕ್ಕಿ : ಗಂಭೀರ ಗಾಯಗೊಂಡ ಮಹಿಳೆ ಮೃತ್ಯು

ರಸ್ತೆ ದಾಟುವ ವೇಳೆ ಮಹಿಳೆಯೊಬ್ಬರು ಬಸ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪಾಣೆಮಂಗಳೂರಿನಲ್ಲಿ ಸೋಮವಾರ ನಡೆದಿದೆ. ನರಿಕೊಂಬು ನಿವಾಸಿ ಸರೋಜಿನಿ (58) ಮೃತ ಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಸರೋಜಿನಿ ಅವರು ಕೆಲಸ ಮುಗಿಸಿ ಮನೆಗೆ ಹೊರಟು ಹೋಗುವ ವೇಳೆ ಪಾಣೆಮಂಗಳೂರು ಮಾಂಡೋವಿ ಮೋಟಾರು ಶೋ ರೂಮ್ ನ ಎದುರುಗಡೆ ರಸ್ತೆಯನ್ನು ದಾಟುವ ವೇಳೆ ಕೆ.ಎಸ್.ಆರ್.ಟಿ.ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ಸರೋಜಿನಿ ಅವರ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಆ ವೇಳೆ ಆಸ್ಪತ್ರೆಗೆ ದಾಖಲು ಮಾಡಲು ಯಾವುದೇ ವಾಹನ ಸಿಗದೆ ಇದ್ದ ಕಾರಣ ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದ ಮೆಲ್ಕಾರ್ ಟ್ರಾಫಿಕ್ ಎಸ್.ಐ.ರಾಜೇಶ್ ಕೆ.ವಿ. ಅವರು ಇಲಾಖಾ ವಾಹನದಲ್ಲಿ ಹಾಕಿಕೊಂಡು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತಲೆಗೆ ಗಂಭೀರ ಪ್ರಮಾಣದ ಗಾಯವಾದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

Related posts

Leave a Reply

Your email address will not be published. Required fields are marked *