Header Ads
Breaking News

ರಸ್ತೆ ಸುರಕ್ಷತೆ ಬಗ್ಗೆ ಜನರಿಗೆ ಜಾಗೃತಿ ಅಗತ್ಯ : ಸುಳ್ಯದಲ್ಲಿ ಶಾಸಕ ಎಸ್. ಅಂಗಾರ ಹೇಳಿಕೆ

ರಸ್ತೆ ಅಪಘಾತಗಳಿಂದ ದಿನೇ ದಿನೇ ಸಾವುನೋವುಗಳು ಸಂಭವಿಸುತ್ತಿದ್ದರೂ ರಸ್ತೆ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಆಗುತ್ತಿಲ್ಲ. ಈ ಬಗ್ಗೆ ಜನರಿಗೆ ಪೋಲಿಸ್ ಇಲಾಖೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಗಳನ್ನು ಮಾಡಬೇಕು ಎಂದು ಶಾಸಕ ಎಸ್. ಅಂಗಾರ ಹೇಳಿದರು.

ಸುಳ್ಯದಲ್ಲಿ ಪೊಲೀಸ್ ಹೈವೇ ಪಟ್ರೋಲ್ ನೂತನ ವಾಹನದ ಉದ್ಘಾಟನೆ ಮತ್ತು ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ರಸ್ತೆಗಳಲ್ಲಿ ಅಪಘಾತ ವಲಯಗಳಾಗಿ ಗುರುತಿಸಿಕೊಂಡಿರುವ ಸ್ಥಳಗಳಲ್ಲಿ ರಸ್ತೆ ಅಭಿವೃದ್ದಿಗೊಳಿಸಲು ಈಗಾಗಲೇ ಸಂಬಂಧಪಟ್ಟ ಪಿಡಬ್ಲ್ಯೂಡಿ ಮತ್ತು ಲೋಕೋಪಯೋಗಿ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸುಳ್ಯ ಸರ್ಕಲ್ ನವೀನ್‌ಚಂದ್ರ ಜೋಗಿ, ಸುಳ್ಯ ಎಸ್‌ಐ ಹರೀಶಕುಮಾರ, ಕ್ರೈಮ್ ಎಸ್‌ಐ ರತ್ನಕುಮಾರ್, ಸುಳ್ಯ ಸರಕಾರಿ ಪ.ಪೂ.ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್, ಶಿಕ್ಷಕಿ ಭವಾನಿ, ವೃತ್ತ ಕಚೇರಿಯ ದೇವರಾಜ್, ಸಿಬ್ಬಂದಿಗಳು ಇದ್ದರು. ಬಳಿಕ ರಸ್ತೆ ಸುರಕ್ಷತೆ ಅಂಗವಾಗಿ ವಿದ್ಯಾರ್ಥಿಗಳ ಜಾಥಾ ನಡೆಯಿತು.

Related posts

Leave a Reply

Your email address will not be published. Required fields are marked *