Header Ads
Breaking News

ರಾಜಕೀಯ ಪಕ್ಷವೊಂದನ್ನು ಕುಟುಂಬದಂತೆ ನೋಡಬೇಕಿದೆ,ಆದ್ರೆ ಕುಟುಂಬವನ್ನೇ ಪಕ್ಷವನ್ನಾಗಿ ಮಾಡಿದ್ದಾರೆ : ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

ದೇವೆಗೌಡರ ಹಿರಿತನದ ಮೇಲೆ ಗೌರವವಿದೆ. ರಾಜಕೀಯ ಪಕ್ಷವೊಂದನ್ನು ಕುಟುಂಬದಂತೆ ನೋಡಬೇಕಿದೆ, ಆದರೆ ಕುಟುಬವನ್ನೇ ಪಕ್ಷವಾಗಿ ಮಾಡುವಂತಹ ಮನಸ್ಥಿತಿಯ ದೇವೇಗೌಡರ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ರಾಜಕಾರಣದಲ್ಲಿರಬೇಕೆಂಬ ಕುಟುಂಬ ರಾಜಕಾರಣದ ಪರಿಕಲ್ಪನೆಗೆ ಕರ್ನಾಟಕ ರಾಜ್ಯದ ಜನರು ಸರಿಯಾದ ಬುದ್ದಿ ಹೇಳಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. 

ಚುನಾವಣೆಯಲ್ಲಿ ಟೀಕೆ, ಪ್ರತಿಟೀಕೆ, ಆರೋಗ್ಯಕರ ಸ್ಪರ್ಧೆ ಮಾಮೂಲಿ. ಆದರೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಪ್ರಧಾನಿ ಮೋದಿಯವರಿಗೆ ಕಳ್ಳ-ಸುಳ್ಳ ಎಂದು ಅತ್ಯಂತ ಕೀಳುಮಟ್ಟದ ಭಾಷೆಯಲ್ಲಿ ಬೈದಿದ್ದಕ್ಕೆ ಕರ್ನಾಟಕದ ಜನರು ತಕ್ಕ ಉತ್ತರ ನೀಡಿದ್ದಾರೆ. ಸಿದ್ಧರಾಮಯ್ಯ ತಮ ಆರೋಪಗಳನ್ನು ಪುನರ್ ಪರಿಶೀಲನೆ ಮಾಡುವುದು ಮಾತ್ರವಲ್ಲದೇ ನರೇಂದ್ರ ಮೋದಿಯವರ ಬೇಷರತ್ ಕ್ಷಮೆ ಯಾಚನೆ ಮಾಡಬೇಕು ಎಂದರು.

ಸುಮಲತಾರಂತಹ ಹೆಣ್ಣುಮಗಳೊಬ್ಬರನ್ನು ಮಣಿಸಲು ಸರಕಾರ ಮಾಡಿದ ಅಸಹ್ಯ ನಡವಳಿಕೆ, 150 ಕೋಟಿ ಖರ್ಚು ಮಾಡಿದ ರೀತಿ, ಅಧಿಕಾರ ದುರ್ಬಳಕೆ ಅಲ್ಲದೇ ಮೂರು ಸುಮಲತಾ ಹೆಸರಿನವರನ್ನು ನಿಲ್ಲಿಸಿದ್ದು ಎಲ್ಲವೂ ತಪ್ಪು. ಈ ನಡುವೆ ಸುಮಲತಾ ಗೆಲವು ರಾಜ್ಯದ ಮತ್ತು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಲ್ಲಲ್ಪಟ್ಟ ಗೌರವ ಎಂದು ಅಭಿಪ್ರಾಯಪಟ್ಟರು.

ಇನ್ನು ಚುನಾವಣ ಪ್ರಕ್ರಿಯೆ ಬಗ್ಗೆ ನಂಬಿಕೆಯಿಲ್ಲದವರು ಮಾತ್ರವೇ ಇವಿಎಂ ಬಗ್ಗೆ ಮಾತನಾಡುತ್ತಾರೆ. ಇದೆಲ್ಲವೂ ಕೂಡ ಹತಾಷೆಯ ಪರಮಾವಧಿ. ಮತಯಂತ್ರದ ಬಗ್ಗೆ ಮಾತನಾಡುವರ ಮೇಲೆ ಚುನಾವಣಾ ಆಯೋಗ ಮತ್ತು ಸುಪ್ರಿಂ ಕಠಿಣವಾಗಿ ಹೇಳಿದೆ. ಅವರು ಗೆದ್ದಲ್ಲಿ ಮತಯಂತ್ರ ಸರಿಯಿರುತ್ತೆ, ಸೋತಲ್ಲಿ ಮಾತ್ರ ಮತಯಂತ್ರದ ಬಗ್ಗೆ ಮಾತನಾಡುವುದು ಬೇಜವಬ್ದಾರಿ ಹೇಳಿಕೆಗಳು ಎಂದು ಪೂಜಾರಿ ಆಕ್ರೋಷ ವ್ಯಕ್ತಪಡಿಸಿದರು. ಇನ್ನು ರಾಹುಲ್ ಗಾಂಧಿ ನಾಯಕತ್ವ ಇನ್ನು ಫಲಿಸಲೇ ಇಲ್ಲ ಆದರೂ ಕೂಡ ಅವರು ನಾಯಕರೆಂದು ಅವರ ಪಕ್ಷದವರು ಹೇಳುತ್ತಾರೆಂದು ಲೇವಡಿ ಮಾಡಿದರು.

ಕರ್ನಾಟಕದಲ್ಲಿ 22 ಕ್ಕೂ ಅಧಿಕ ಲೋಕಸಭಾ ಸ್ಥಾನ ಪಡೆಯುವ ಬಗ್ಗೆ ಈ ಹಿಂದೆಯೂ ಹೇಳಿಕೆ ನೀಡಿದ್ದು ನಿರೀಕ್ಷೆ ಮೀರಿ ಇನ್ನೂ ಅಧಿಕ ಸ್ಥಾನ ಪಡೆದಿದ್ದು ಮೋದಿಯವರ ಕಾರ್ಯಶೈಲಿಯ ಮೇಲೆ ಜನರಿಟ್ಟ ನಂಬಿಕೆಯ ಸೂಚಕವಾಗಿದೆ. ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೋಯ್ಲಿ, ಮುನಿಯಪ್ಪ ಅವರಂತ ನಾಯಕರ ಸೋಲು ಜನರು ಬಿಜೆಪಿ ಮೇಲಿಟ್ಟ ನಂಬಿಕೆಗೆ ಸಾಕ್ಷಿ. ರಾಷ್ಟ್ರಕ್ಕೋಸ್ಕರ ಸಮರ್ಪಣೆ ಮಾಡಿಕೊಂಡ ಮೋದಿಯಂತಹ ಮಹಾನ್ ನಾಯಕರನ್ನು ಜನರು ನೆಚ್ಚಿದ್ದಾರೆಂದರು. ಕರ್ನಾಟಕದ ಫಲಿತಾಮ್ಶದ ಬಗ್ಗೆ ಮೋದಿ ಮತ್ತು ಅಮಿತ್ ಶಾ ಮೆಚ್ಚಿದ್ದು ಕರ್ನಾಟಕದ ಸಂಸದರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಉತ್ತಮ ಸ್ಥಾನಮಾನ ನೀಡುವ ವಿಶ್ವಾಸವಿದೆ ಎಂದರು.

Related posts

Leave a Reply

Your email address will not be published. Required fields are marked *