Header Ads
Breaking News

ರಾಜ್ಯಕ್ಕೆ ಮಾದರಿ ಶ್ರೀನಿವಾಸ ವಿಶ್ವವಿದ್ಯಾಲಯ

ರಾಜ್ಯ ಬಜೆಟ್‍ನಲ್ಲಿ ಅವಿಭಾಜ್ಯದಕ್ಷಿಣಕನ್ನಡಜಿಲ್ಲೆಗೆಅಭಿವೃದ್ಧಿ ವಿಚಾರವಾಗಿ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ನಮ್ಮ ಮುಖ್ಯಮಂತ್ರಿಜೊತೆ ವಿಶೇಷವಾಗಿ ಚರ್ಚಿಸಲಿದ್ದೇನೆಎಂದುದಕ್ಷಿಣಕನ್ನಡಜಿಲ್ಲಾಉಸ್ತುವಾರಿ ಸಚಿವಕೋಟಾ ಶ್ರೀನಿವಾಸ್ ಪೂಜಾರಿ ನುಡಿದರು

ಅವರು ಶುಕ್ರವಾರ ಮುಕ್ಕ ಶ್ರೀನಿವಾಸ ವಿಶ್ವವಿದ್ಯಾಲಯ, ಶ್ರೀನಿವಾಸ ಶಿಕ್ಷಣ ಸಮೂಹ ಸಂಸ್ಥೆಗಳು ಮತ್ತು ವಿಜಯಲಕ್ಷ್ಮಿ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ ಹಾಗೂವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರಗಳು ಮಾಡುವಅತ್ಯತ್ತಮ ಕೆಲಸಗಳನ್ನು ಶ್ರೀನಿವಾಸ ವಿಶ್ವವಿದ್ಯಾಲಯದಕುಲಾಧಿಪತಿ ಸಿಎ. ಎ. ರಾಘವೇಂದ್ರರಾವ್‍ರವರು ಮಾಡುತ್ತಿರುವುದುಅಭಿನಂದನಾರ್ಹ ವಿಚಾರಎಂದಅವರು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯಬೇಕಿದೆಎಂದರು. ಆರೋಗ್ಯ ಮತ್ತು ಶಿಕ್ಷಣದ ವಿಷಯದಲ್ಲಿರಾಜ್ಯದಲ್ಲಿಯೇದಕ್ಷಿಣಕನ್ನಡಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಅವುಗಳನ್ನು ವ್ಯವಸ್ಥಿತವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ನಿಭಾಯಿಸಿಕೊಂಡು ಹೋಗುತ್ತಿವೆ. ಶ್ರೀನಿವಾಸ ವಿಶ್ವವಿದ್ಯಾಲಯವು ಮಾದರಿ ಶಿಕ್ಷಣ ಸಂಸ್ಥೆಯಾಗಿ ರೂಪುಗೊಳ್ಳಲಿ ಎಂದರು.

ಮುಖ್ಯ ಅತಿಥಿಗಳಾಗಿ ದಕ್ಷಿಣಕನ್ನಡಜಿಲ್ಲಾ ಪಂಚಾಯತ್‍ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಶ್ರೀ ಡಾ. ಸೆಲ್ವಮಣಿಆರ್. ಮಾತನಾಡಿ, ತನ್ನಕಾಲೇಜಿನ ದಿನಗಳನ್ನು ಮೆಲುಕು ಹಾಕುತ್ತಾ, ವಿದ್ಯಾರ್ಥಿಗಳು ಮುಂದಿನ ಭವಿಷ್ಯದಜೀವನವನ್ನುಯೋಜಿಯವಾಗಿ ರೂಪಿಸಿಕೊಳ್ಳಬೇಕು. ಸಿಎ ಎ. ರಾಘವೇಂದ್ರರಾವ್‍ರವರುತೆಗೆದುಕೊಂಡ ದಿಟ್ಟ ನಿರ್ಧಾರಗಳು ಎಲ್ಲರಿಗೂ ಮಾದರಿಯಾಗಬೇಕು. ಸಾಮಾಜಿಕ ಜಾಲತಾಣಗಳನ್ನು ಉತ್ತಮ ಕಾರ್ಯಗಳಿಗೆ ಉಪಯೋಸಿಕೊಳ್ಳಬೇಕು. ಯುವಜನತೆಜೀವನದಲ್ಲಿಎದುರಾಗುವ ಸವಾಲುಗಳನ್ನು ಮೆಟ್ಟಿ ನಿಂತು ಯಶಸ್ವಿಯಾಗಿ ಸ್ವೀಕರಿಸಬೇಕು ಎಂದರು.

ಎ. ಶಾಮರಾವ್ ಪ್ರತಿಷ್ಠಾನದಅಧ್ಯಕ್ಷ ಹಾಗೂ ಶ್ರೀನಿವಾಸ ವಿಶ್ವವಿದ್ಯಾಲಯದಕುಲಾಧಿಪತಿ ಸಿಎ ಎ. ರಾಘವೇಂದ್ರರಾವ್‍ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಮನೆಮಕ್ಕಳಂತೆ ನೋಡಿಕೊಳ್ಳಬೇಕು. ಉದ್ಯೋಗವಕಾಶವು ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಅರಸಿಕೊಂಡು ಬರಬೇಕುಎನ್ನುವಉದ್ದೇಶದಿಂದಕೊಟ್ಯಾಂತರರೂಪಾಯಿ ವೆಚ್ಚದಲ್ಲಿಕೌಶಲ್ಯಾಭಿವೃದ್ಧಿ ಪ್ರಯೋಗ ಶಾಲೆಗಳನ್ನು ನಮ್ಮ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸುತ್ತಿದ್ದೇವೆ. ಪ್ರಸಕ್ತ ವರ್ಷದಲ್ಲಿ ವಿದೇಶದ 50 ಪ್ರಖ್ಯಾತ ವಿಶ್ವವಿದ್ಯಾನಿಲಯಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಂಡಿದ್ದೇವೆ. ಇದರ ಮೂಲಕ ಶ್ರೀನಿವಾಸ ವಿಶ್ವವಿದ್ಯಾಲಯವುರಾಷ್ಟ್ರದಲ್ಲಿಯೇ ಮಾದರಿ ವಿಶ್ವವಿದ್ಯಾಲಯವಾಗಿ ರೂಪುಗೊಳ್ಳಬೇಕು ಎನ್ನುವುದು ನನ್ನ ಕನಸು ಹಾಗೂ ಆಶಯಎಂದರು.

ವೇದಿಕೆಯಲ್ಲಿ ಪ್ರತಿಷ್ಠಾನದಉಪಾಧ್ಯಕ್ಷ ಹಾಗೂ ಸಹ ಕುಲಾಧಿಪತಿಡಾ. ಎ. ಶ್ರೀನಿವಾಸ್‍ರಾವ್, ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿ ವಿಜಯಲಕ್ಷ್ಮೀಆರ್. ರಾವ್, ಪ್ರತಿಷ್ಠಾನದ ಕಾರ್ಯದರ್ಶಿ ಮಿತ್ರಾಎಸ್. ರಾವ್, ಕುಲಪತಿಡಾ. ಪಿ. ಎಸ್. ಐತಾಳ್, ಕುಲಸಚಿವಡಾ. ಅನಿಲ್ ಕುಮಾರ್, ಕುಲಸಚಿವ (ಮೌಲ್ಯಮಾಪನ) ಡಾ. ಶ್ರೀನಿವಾಸ್ ಮಯ್ಯ ಡಿ., ಕುಲಸಚಿವ (ಅಭಿವೃದ್ಧಿ) ಡಾ. ಅಜಯ್, ಸಂಸ್ಥಾಪಕರ ದಿನಾಚರಣೆಯ ಸಂಯೋಜಕರುಡಾ. ಮನೋಜ್ ವರ್ಮ, ಶ್ರೀನಿವಾಸ್ ವಿಶ್ವವಿದ್ಯಾಲಯದ ವಿವಿಧ ಕಾಲೇಜುಗಳ ಡೀನ್‍ಗಳು, ಮೆಘನಾ ಎಸ್. ರಾವ್‍ಉಪಸ್ಥಿತರಿದ್ದರು.

ಶ್ರೀನಿವಾಸ ವಿಶ್ವವಿದ್ಯಾಲಯ ಹಾಗೂ ಶ್ರೀನಿವಾಸ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕ ವರದಿಯ ಪುಸ್ತಿಕೆಗಳನ್ನು ಬಿಡುಗಡೆಗೊಳಿಸಲಾಯಿತು.

ಎ. ಶಾಮರಾವ್ ಪ್ರತಿಷ್ಠಾನವು ಅವಿಭಜಿತದಕ್ಷಿಣಕನ್ನಡಜಿಲ್ಲೆಯ ಪ್ರೌಢಶಾಲೆ ಮತ್ತು ಪದವಿ ಪೂರ್ವ ವಿಭಾಗಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನು ಗುರುತಿಸಿ ನೀಡುವ ಎ. ಶಾಮರಾವ್ ಸ್ಮಾರಕಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಪಡುಬಿದ್ರಿ ಗಣಪತಿ ಪ್ರೌಢಶಾಲೆಯ ಸಂಸ್ಕøತ ಶಿಕ್ಷಕ ಡಾ. ರಾಘವೇಂದ್ರರಾವ್ ಮತ್ತು ಮಂಗಳೂರು ವಾಮಂಜೂರಿನಎಸ್.ಡಿ.ಎಂ. ಮಂಗಳ ಜ್ಯೋತಿ ಪ್ರೌಢಶಾಲೆಯ ಸಂಗೀತ ಶಿಕ್ಷಕಿ ಕಸ್ತೂರಿ, ಅತ್ಯುನ್ನತ ಸಾಮಾಜಿಕ ಸೇವೆಗೆ ನೀಡಲ್ಪಡುವ ಎ. ಶಾಮರಾವ್ ಸ್ಮಾರಕ ಪ್ರಶಸ್ತಿಯನ್ನು ಸುಳ್ಯ ತಾಲೂಕಿನ ಸೇತು ಬಂಧು, ಬ್ರಿಡ್ಜ್ ಮ್ಯಾನ್‍ಆಫ್‍ಇಂಡಿಯಾ, ‘ಪದ್ಮಶ್ರೀ ಡಾ. ಗಿರೀಶ್ ಭಾರಧ್ವಜ್‍ಅವರಿಗೆ ನೀಡಿಗೌರವಿಸಲಾಯಿತು. ಡಾಕ್ಟರೇಟ್ ಪಧವೀದರರಿಗೆ, ರ್ಯಾಂಕ್ ವೀಜೇತರಿಗೆ ಹಾಗೂ ಸಂಶೋಧನ ನಿರತಉಪನ್ಯಾಸಕರಿಗೆ ಪ್ರಮಾಣ ಪತ್ರವನ್ನು ನೀಡಿಗೌರವಿಸಲಾಯಿತು.

Related posts

Leave a Reply

Your email address will not be published. Required fields are marked *