Header Ads
Header Ads
Header Ads
Breaking News

ರಾಜ್ಯದ ಆರ್ಥಿಕ ಪರಿಸ್ಥಿತಿಯ ಶ್ವೇತಪತ್ರ ಹೊರಡಿಸಿ ಉಡುಪಿಯಲ್ಲಿ ಮಾಜಿ ಸಿ‌ಎಂ ಯಡಿಯೂರಪ್ಪ ಆಗ್ರಹ

 

ರಾಜ್ಯದ ಆರ್ಥಿಕ ಪರಿಸ್ಥಿತಿಯ ಶ್ವೇತಪತ್ರ ಹೊರಡಿಸಿ ಅಂತ ಮಾಜಿ ಸಿ‌ಎಂ ಯಡಿಯೂರಪ್ಪ ಆಗ್ರಹಿಸಿದ್ದಾರೆ.  ಉಡುಪಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯಡಿಯೂರಪ್ಪ ಎಲ್ಲೆಲ್ಲಿ ಸಾಲ ಪಡೆದಿದ್ದೀರಿ ಹೇಳಿ. ಕೇಂದ್ರ ಅನುದಾನ ಕೊಟ್ಟದ್ದು ಎಲ್ಲೋಯ್ತು. ಅಧಿವೇಶನದಲ್ಲಿ ಶ್ವೇತಪತ್ರಕ್ಕೆ ಒತ್ತಾಯಿಸುತ್ತೇವೆ. ಜನರಿಗೆ ರಾಜ್ಯ ಸರ್ಕಾರ ಮಾಡಿದ ಸಾಲದ ಲೆಕ್ಕ ಕೊಡಿ. ಸಿ‌ಎಂ ಖಜಾನೆ ಖಾಲಿ ಮಾಡಿ ಸರ್ಕಾರವನ್ನು ದಿವಾಳಿ ಮಾಡಲು ಹೊರಟಿದ್ದಾರೆ ಅಂತ ಆರೋಪ ಮಾಡಿದರು.

ನಾನು ಜೈಲಿಗೆ ಹೋಗಿ ಬಂದವನು ಅಂತ ಸಿ‌ಎಂ ಸಿದ್ದು ಹೇಳ್ತಾ ಇದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬೇಲ್ ನಲ್ಲಿ ಹೊರಗಿದ್ದಾರೆ. ಜಾರ್ಜ್ ಯಾವ ಸಂದರ್ಬದಲ್ಲೂ ಜೈಲು ಪಾಲಾಗಬಹುದು. ಜಾರ್ಜ್ ರಾಜಿನಾಮೆ ಕೊಡುವ ತನಕ ಸದನದ ಒಳಗೆ ಹೋರಾಟ ಮಾಡಲಾಗುವುದು.ಸದನದ ಒಳಗೆ ಹೋರಾಟ ಬೇಡ ಎಂಬ ಬಗ್ಗೆ ಕುಮಾರ ಸ್ವಾಮಿ ಅವರ ಸಲಹೆ ಅಗತ್ಯ ಇಲ್ಲ. ನಮ್ಮದು ಕೆಲಸ ನಾವು ನೀಡುತ್ತೇವೆ. ನಿಮ್ಮ ಕೆಲಸ ನೀವು ನೋಡಿ ಎಂದರು. ನಾನಗೆ ಅರಾಳು ಮರಳು ಅಂತ ಸಿದ್ದು ಹೇಳುತ್ತಾರೆ. ತಾಕತ್ತು ಇದ್ದರೆ ೮ ದಿನ ನಿರಂತರ ಪ್ರವಾಸ ಮಾಡಿ ಬನ್ನಿ.ಆಗ ತಿಳಿಯುತ್ತೆ ಯಾರಿಗೆ ಅರಳು ಮರಳು ಅಂತ ಎಂದು ಹೇಳಿದರು. ನಮ್ಮ ತಪ್ಪಿನಿಂದಲೇ ಹಾಲಾಡಿ ಪಕ್ಷ ಬಿಟ್ಟು ಹೋಗಿದ್ದಾರೆ.ತಾಂತ್ರಿಕ ಕಾರಣಗಳಿಂದ ಪಕ್ಷ ಸೇರ್ಪಡೆ ಈಗ ಆಗುತ್ತಿಲ್ಲ ಡಿಸೆಂಬರ್ ಬಳಿಕ ಪಕ್ಷ ಸೇರ್ಪಡೆ ನಡೆಯಲಿದೆ ಎಂದರು.

Related posts

Leave a Reply