Header Ads
Breaking News

ರಾಜ್ಯದ ಉಜ್ವಲ ಭವಿಷ್ಯಕ್ಕಾಗಿ ಸೈಕಲ್ ಯಾತ್ರೆ

ಜನರನ್ನು ರಾಜ್ಯದ ಉಜ್ವಲ ಭವಿಷ್ಯದೆಡೆಗೆ ಮತ್ತು ಸದೃಢತೆಗೆ ಚಲಿಸಲು ಪ್ರೆರೇಪಿಸಿಲು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ರಾಜ್ಯಾದ್ಯಂತ ಚಲಿಸು ಕರ್ನಾಟಕ ಹೆಸರಿನಲ್ಲಿ 2,500 ಕಿಲೋಮೀಟರ್ ಸೈಕಲ್ ಯಾತ್ರೆಯನ್ನು ರಾಜ್ಯ ಅಧ್ಯಕ್ಷರಾದ ರವಿಕೃಷ್ಣಾ ರೆಡ್ಡಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ರಾಜ್ಯ ಉಪಧ್ಯಕ್ಷರಾದ ಅಮೃತ್ ಶೆಣೈ ಹೇಳಿದರು.

ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕರ್ನಾಟಕವು ಕೋವಿಡ್ ವೈರಸ್‍ನಿಂದ ನಲುಗಿದಂತೆ ಭ್ರಷ್ಟ ರಾಜಕೀಯ ಮತ್ತು ಆಡಳಿತ ವ್ಯವಸ್ಥೆಯಿಂದ ಸೊರಗಿದೆ. ಭ್ರಷ್ಟ ವ್ಯವಸ್ಥೆಯಿಂದ ನಾಡಿನ ಮತ್ತು ಜನರ ಸಂಪತ್ತು ಲೂಟಿಯಾಗುತ್ತಿದೆ. ಒಂದೆಡೆ ನಿರಂತರವಾಗಿ ಅಕ್ರಮ ಮರಳು ಕಲ್ಲು ಅದಿರು ಗಣಿಗಾರಿಕೆ ನಡೆಯುತ್ತಿದೆ. ಜನಸಾಮಾನ್ಯರು ಮರಳು ಸಿಗದೆ ಪರದಾಡುತ್ತಿದ್ದಾರೆ. ರೈತರು ಬರ-ನೆರೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅದರ ಲಾಭವನ್ನು ಅಧಿಕಾರಿಗಳು ಮತ್ತು ಪಟ್ಟಭದ್ರರು ಪಡೆಯುತ್ತಿದ್ದಾರೆ ಎಂದ ಅವರು ಕಳೆದ ವರ್ಷದ ನೆರೆ ಪರಿಹಾರ ಬಹುತೇಕರಿಗೆ ಇಲ್ಲಿಯವರೆಗೆ ಸಿಕ್ಕಿಲ್ಲ ಎಂದು ಹೇಳಿದರು.

ರಸ್ತೆ ತೆರಿಗೆ ಮತ್ತು ಡೀಸೆಲ್ ಪೆಟ್ರೋಲ್ ಮೇಲಿನ ಸೆಸ್‍ಗಳಿಂದ ರಸ್ತೆ ನಿರ್ಮಿಸಬೇಕಾದ ಸರ್ಕಾರವು ಟೋಲ್ಗ್‍ಗಳಲ್ಲಿ ಸುಂಕ ವಸೂಲಿ ಮಾಡುತ್ತಿದೆ. ಇದರಲ್ಲಿ ಸುರತ್ಕಲ್‍ನಂತಹ ಟೋಲ್‍ಗಳು ಕೂಡ ಕಾರ್ಯ ನಿರ್ವಹಿಸುತ್ತಿದೆ. ಅಕ್ರಮಗಳ ವಿರುದ್ಧ ಹೋರಾಡುವವರನ್ನು ಹೆದರಿಸಲಾಗುತ್ತಿದೆ ಹೆದರದಿದ್ದರೆ ಕೊಲೆ ಮಾಡಲಾಗುತ್ತಿದೆ ಇದಕ್ಕೆ ಉದಾಹರಣೆ ವಿನಾಯಕ ಬಾಳಿಗ ಅವರ ಕೊಲೆಯಾಗಿ ನಾಲ್ಕು ವರ್ಷಗಳೂ ಕಳೆದರೂ ತಪ್ಪಿತಸ್ಥರಿಗೆ ಶಿಕ್ಷೆ ಆಗಿಲ್ಲ ಈ ವಿಚಾರಗಳ ಬಗ್ಗೆ ಸ್ಥಳೀಯವಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಹೋರಾಡುತ್ತದೆ ಎಂದು ಹೇಳಿದರು.

ಇನ್ನು ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಚಲಿಸು ಕರ್ನಾಟಕ ಸೈಕಲ್ ಯಾತ್ರಯನ್ನು ಮೂರು ಹಂತಗಳಲ್ಲಿ ಸೆಪ್ಟಂಬರ್, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಮೊದಲ ಹಂತದ 15 ದಿನಗಳ ಯಾತ್ರೆಯು ಸೆಪ್ಟಂಬರ್ 14ರಿಂದ ಕೋಲಾರದಲ್ಲಿ ಆರಂಭವಾಗಲಿದೆ ಎಂದು ಹೇಳಿದರು.ಆನಂತರರ ಕರ್ನಾಟಕ ರಾಷ್ಟ್ರ ಸಮಿತಿಯ ಜಿಲ್ಲಾಧ್ಯಕ್ಷ ಅಲೆಕ್ಸಾಂಡರ್ ಡಿಸೋಜಾ ಮಾತನಾಡಿ, ಇವತ್ತು ಯಾವ ಕಡೆ ಆದ್ರೂ ಸಮಸ್ಯೆ ಪರಿಹಾರ ಸಿಗದ ಪರಿಸ್ಥಿತಿ. ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ಮುಕ್ತ ಕರ್ನಾಟಕ ನಿರ್ಮಿಸುವಲ್ಲಿ ಸಹಕರಿಸಬೇಕೆಂದು ಹೇಳಿದರು.

ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಬಜಲಕೇರಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *