Header Ads
Breaking News

ರಾಜ್ಯಸಭಾ ತೆರವಾದ ಸ್ಥಾನಕ್ಕೆ ಚುನಾವಣೆ-ದಿ. ಅಶೋಕ್ ಗಸ್ತಿ ಅವರ ಪತ್ನಿಗೆ ಅವಕಾಶ ನೀಡಬೇಕು-ಜಿ.ಬಿ. ವೆಂಕಟೇಶ್ ಒತ್ತಾಯ

ಪುತ್ತೂರು: ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿ ಲೋಕಸಭಾ ಕಲಾಪಗಳಲ್ಲಿ ಭಾಗವಹಿಸುವ ಮುನ್ನವೇ ಅಕಾಲಿಕ ಸಾವನ್ನಪ್ಪಿದ ಸವಿತಾ ಸಮಾಜದ ಮುಖಂಡರಾಗಿದ್ದ ದಿ. ಅಶೋಕ್ ಗಸ್ತಿ ಅವರ ತೆರವಾದ ಸ್ಥಾನಕ್ಕೆ ಅವರ ಪತ್ನಿ ಸುಮಾ ಗಸ್ತಿ ಅವರಿಗೆ ಅವಕಾಶವನ್ನು ನೀಡಬೇಕು ಎಂದು ಪುತ್ತೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಜಿ.ಬಿ. ವೆಂಕಟೇಶ್ ಭಂಡಾರಿ ಒತ್ತಾಯಿಸಿದ್ದಾರೆ.

ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸವಿತಾ ಸಮಾಜಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಿಜೆಪಿ ಅಶೋಕ್ ಗಸ್ತಿಯವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಿತ್ತು. ಅಕಾಲಿಕ ನಿಧನದಿಂದಾಗಿ ಇದೀಗ ಅವರ ಸ್ಥಾನ ತೆರವಾಗಿದ್ದು, ಅವರ ಪತ್ನಿ ಸುಮಾ ಗಸ್ತಿ ಉನ್ನತ ಶಿಕ್ಷಣವನ್ನು ಪಡೆದಿರುವುದರಿಂದ ಅವರಿಗೇ ತೆರವಾದ ಸ್ಥಾನವನ್ನು ನೀಡಬೇಕು ಎಂದು ವಿನಂತಿಸಿದರು.
ದೇಶದೆಲ್ಲೆಡೆ ಲಾಕ್‌ಡೌನ್ ಘೋಷಿಸಿದ ಪರಿಣಾಮವಾಗಿ ಕ್ಷೌರಿಕ ವೃತ್ತಿ ನಡೆಸುತ್ತಿರುವ ಸವಿತಾ ಸಮಾಜದವರು ಉದ್ಯೋಗವಿಲ್ಲದೆ ಸಂಕಷ್ಟದ ಜೀವನವನ್ನು ಸಾಗಿಸುವಂತಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಸರಕಾರ ಕ್ಷೌರಿಕ ವೃತ್ತಿ ನಡೆಸುತ್ತಿರುವವರಿಗೆ ತಲಾ ರೂ. ೫ ಸಾವಿರ ಪರಿಹಾರ ಘೋಷಿಸಿತ್ತು. ಈ ಹಿನ್ನಲೆಯಲ್ಲಿ ಪುತ್ತೂರು ತಾಲೂಕಿನಿಂದ ಸುಮಾರು500 ಮಂದಿ ಅರ್ಜಿ ಸಲ್ಲಿಸಿದ್ದರೂ ಕೇವಲ ಶೇ.೧೦ರಷ್ಟು ಮಂದಿಗೆ ಮಾತ್ರ ಪರಿಹಾರ ಮೊತ್ತ ಲಭಿಸಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ವಿವಿಧ ತಾಂತ್ರಿಕ ಕಾರಣಗಳನ್ನು ನೀಡುತ್ತಿದ್ದು, ಸರಕಾರ ಈ ಕುರಿತು ತುರ್ತು ಗಮನಹರಿಸಿ ಪರಿಹಾರ ಮೊತ್ತ ಒದಗಿಸಿಕೊಡಬೇಕು ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಸವಿತಾ ಸಮಾಜದ ಖಜಾಂಚಿ ಪ್ರವೀಣ್ ಭಂಡಾರಿ, ಜಿಲ್ಲಾ ಪ್ರತಿನಿಧಿ ರಮೇಶ್ ಭಂಡಾರಿ ಮುರ ಉಪಸ್ಥಿತರಿದ್ದರು.

ವರದಿ: ಅನೀಶ್ ಪುತ್ತೂರು

Related posts

Leave a Reply

Your email address will not be published. Required fields are marked *