
ರಾಜ್ಯಾದ್ಯಂತ ಕೆಎಸ್ಆರ್ಟಿಸಿ ನೌಕರರ ಮುಷ್ಕರ ನಡೆಯುತ್ತಿದ್ದು, ಉಡುಪಿಯ ಕೆಎಸ್ಆರ್ಟಿಸಿ ಡಿಪೋದಲ್ಲಿ ಮೆಕ್ಯಾನಿಕ್ ನಾಗೇಶ್ ಬೋವಿ ದೀಡ್ ನಮಸ್ಕಾರ ಹಾಕಿ ಪ್ರತಿಭಟನೆ ನಡೆಸುತ್ತಿದ್ದಾರೆ. ಉಡುಪಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರಟ ನಾಗೇಶ್ ಬಸ್ ನಿಲ್ದಾಣದಿಂದ ಕೃಷ್ಣ ಮಠದವರೆಗೆ ಧೀರ್ಘದಂಡ ನಮಸ್ಕಾರ ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ನಾಗೇಶ್ ಬೋವಿ ದೀಡ್ ನಮಸ್ಕಾರ ದ ಮೂಲಕ ಪ್ರತಿಭಟನೆಗೆ ಅವಕಾಶವನ್ನು ಕೋರಿದ್ದರು. ಆದರೆ ಉಡುಪಿ ನಗರ ಠಾಣೆಯಲ್ಲಿ ಪ್ರತಿಭಟನೆ ಅವಕಾಶ ಕೋರಿದ್ದರು. ಆದರೆ ಪೊಲೀಸರು ಅವಕಾಶ ನೀಡಿಲ್ಲ. ಆದರೂ ನಾಗೇಶ್ ಬೋವಿಯವರು ಉಡುಪಿಯ ಪ್ರಮುಖ ರಸ್ತೆಗಳಲ್ಲಿ ದೀಢ್ ನಮಸ್ಕಾರ ಹಾಕುತ್ತಾ ಸಾಗಿದರು.