Header Ads
Header Ads
Breaking News

ರಾಜ್ಯ ರೈತ ಸಂಘ ಸುಳ್ಯ ಘಟಕದಿಂದ ತಿಂಗಳ ಸಭೆ

ಸುಳ್ಯ: ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ಘಟಕದ ತಿಂಗಳ ಸಭೆಯು ಸುಳ್ಯದ ಎಪಿಎಮ್‌ಸಿ ಸಭಾಂಗಣದಲ್ಲಿ ನಡೆಯಿತು. ಸಾಲ ಮನ್ನಾ ವಿಚಾರದಲ್ಲಿ ರೈತ ಮುಖಂಡರ ಸಮ್ಮುಖದಲ್ಲಿ ನೇರವಾಗಿ ಸಹಕಾರಿ ಇಲಾಖೆ ಮುಖ್ಯ ನಿಬಂಧಕರು ಬೆಂಗಳೂರು ಇವರಿಗೆ ಫೋನ್ ಮೂಲಕ ಸಂಪರ್ಕಿಸಿ ಕೇಳಿದಾಗ ಅವರು ಈ ತಿಂಗಳ ಕೊನೆಯ ಒಳಗಾಗಿ ಸಾಲ ಮನ್ನಾ ದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಕೊಡುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ.ಈ ತಿಂಗಳ ಒಳಗಾಗಿ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

ಅಲೆಟ್ಟಿ,ಅಜ್ಜಾವರ ,ಜಾಲ್ಸೂರು, ಉಬರಡ್ಕ, ಅರಂತೋಡು ,ತೊಡಿಕಾನ, ಐವರ್ನಾಡು ,ಚೊಕ್ಕಾಡಿ ,ಮಡಪ್ಪಾಡಿ,ಮುಂತಾದ ಹಲವಾರು ಗ್ರಾಮದ ರೈತ ಮುಖಂಡರು ಭಾಗವಹಿಸಿದ್ದರು.ಐವರ್ನಾಡು ಗ್ರಾಮ ಸಮಿತಿ ರಚನೆ ದಿನಾಂಕ 24ರಂದು ರಚಿಸಲಾಸಗುವುದು.ಇನ್ನಿತರ ಹಲವಾರು ಗ್ರಾಮ ಸಮಿತಿಗಳನ್ನು ಸದ್ಯದಲ್ಲಿ ರಚಿಸಲಾಗುವುದು.ರಾಜ್ಯ ಕಾರ್ಯದರ್ಶಿ ರವಿಕಿರಣ ಪುಣಚ ಮಾತನಾಡಿ ದೇಶಾದ್ಯಂತ ಆರ್‌ಸಿಇಪಿ ಒಪ್ಪಂದದ ವಿರುದ್ದ ನಡೆದ ರೈತರ ಹೋರಾಟ ಯಶಸ್ವಿಯಾಗಿದೆ .ಈ ರೀತಿ ರೈತರು ಸಂಘಟಿತರಾಗಿ ಹೋರಾಟ ನಡೆಸಲೇ ಬೇಕಾದ ಅನಿವಾವಾರ್ಯತೆ ಈಗ ಇದೆ ಎಂದರು.ಸಭೆಯಲಿ ನೂತನ ದ.ಕ. ಜಿಲ್ಲಾ ಅಧ್ಯಕ್ಷ ಪ್ರಕಾಶ್ ಫೆರ್ನಾಂಡಿಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಪೆರಾಬೆ ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ ಮಜಿಗುಂಡಿ ,ತಾಲೂಕು ಉಪಾದ್ಯಕ್ಷತಾಲೂಕು ಉಪಾಧ್ಯಕ್ಷ ಮುರಳಿಧರ್ ಅಡ್ಕಾರ್ ,ತಾಲೂಕು ಸಂಚಾಲಕ ಸಬಾಸ್ಟಿಯನ್ , ತಾಲೂಕು ಖಜಾಂಜಿ ದೇವಪ್ಪ ಕುಂದಲ್ಪಾಡಿ ಉಪಸ್ತಿತರಿದ್ದರು.

Related posts

Leave a Reply

Your email address will not be published. Required fields are marked *