Header Ads
Breaking News

ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಶಿಷ್ಯ ವೇತನಕ್ಕೆ ಅಭಿಷೇಕ್ ಎಂ.ಬಿ. ಆಯ್ಕೆ

ಸಂಗೀತ ಮತ್ತು ನೃತ್ಯ ಕ್ಷೇತ್ರದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ನೀಡುವ 2019-20ನೇ ಸಾಲಿನ ರಾಜ್ಯ ಮಟ್ಟದ ಶಿಷ್ಯ ವೇತನಕ್ಕೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕೊಳಲು ವಿಭಾಗದಲ್ಲಿ ಮಂಗಳೂರು ಮರೋಳಿಯ ಅಭಿಷೇಕ್ ಎಂ.ಬಿ. ಶಿಷ್ಯ ವೇತನಕ್ಕೆ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ಜನವರಿ 12 ರಿಂದ ಜನವರಿ 16 ರ ವರೆಗೆ ಉತ್ತರಪ್ರದೇಶದ ಲಕ್ನೋದ ಇಂದಿರಾಗಾಂಧಿ ಪ್ರತಿಷ್ಟಾನದಲ್ಲಿ ನಡೆದ 23ನೇ ರಾಷ್ಟ್ರೀಯ ಯುವಜನೋತ್ಸವ-2020 ರಲಿ ್ಲಶಾಸ್ತ್ರೀಯ ಸಂಗೀತ – ಕೊಳಲು ವೈಯಕ್ತಿಕ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ. ಎಂ.ಬಾಲಕೃಷ್ಣ ಮತ್ತು ಜಯದಂಪತಿಯ ಪುತ್ರನಾದ ಇವರು ವಿದ್ವಾನ್ರಾಜೇಶ್ಬಾಗ್ಲೋಡಿ, ಕಲಾತರಂಗಿಣಿ, ಸುರತ್ಕಲ್ ವಿದ್ಯಾರ್ಥಿಯಾಗಿದ್ದು ಪ್ರಸ್ತುತ ಚೆನ್ನೈನ ವಿದುಷಿ ಶಾಂತಲಾ ಸುಬ್ರಹ್ಮಣ್ಯಂ ಇವರಲ್ಲಿ ಉನ್ನತ ತರಬೇತಿಯನ್ನುಪಡೆಯುತ್ತಿದ್ದಾರೆ. ಇವರು ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆಂಡ್ ಮ್ಯಾನೇಜ್‍ಮೆಂಟ್‍ನ ಅಚಿತಿಮ ವರ್ಷದ ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾರೆ.

Related posts

Leave a Reply

Your email address will not be published. Required fields are marked *