Header Ads
Header Ads
Breaking News

ರಾಜ್ಯ ಸಮ್ಮಿಶ್ರ ಸರ್ಕಾರದ್ದು ಐಸ್‌ ಕ್ಯಾಂಡಿ ಬಜೆಟ್- ಸಂಜೀವ ಮಠಂದೂರು ವ್ಯಂಗ್ಯ

ಕೇಂದ್ರ ಬಜೆಟ್‌ನ್ನು ಲಾಲಿಪಾಪ್ ಎಂದು ಕಾಂಗ್ರೆಸ್ಸಿಗರು ಟೀಕಿಸಿದರು. ಇದೀಗ ರಾಜ್ಯದ ಸಮ್ಮಿಶ್ರ ಸರ್ಕಾರದ ಬಜೆಟ್ ಐಸ್ ಕ್ಯಾಂಡಿ ಬಜೆಟ್‌ನ್ನು ಮಂಡಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಮತ್ತು ಪುತ್ತೂರು ಶಾಸಕ ಸಂಜೀವ ಮಠಂದೂರು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಜೆಟ್ ಮಂಡಿಸುವ ಪ್ರತಿಯನ್ನು ಮೊದಲು ಶಾಸಕರಿಗೆ ನೀಡುವ ಸಂಪ್ರದಾಯವನ್ನು ಈ ಬಾರಿ ಮುರಿಯಲಾಗಿದೆ. ಶಾಸಕರಿಗೆ ಪ್ರತಿ ಸಿಗುವ ಮೊದಲು ಸದನದ ಹೊರಗೆ ಸಾರ್ವಜನಿಕರಿಗೆ ಬಜೆಟ್‌ನ ಪ್ರತಿ ದೊರೆತಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ತಾರತಮ್ಯ ಎಸಗಿದ್ದಾರೆ. ಬಜೆಟ್‌ನಲ್ಲಿ ಕರಾವಳಿ ಜನರಿಗೆ ಯಾವುದೇ ಪ್ರಯೋಜನವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ೫೬ ಸಾವಿರ ಅಡಿಕೆ ಬೆಳೆಗಾರರು ಕೊಳೆ ರೋಗ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಯಾವುದೇ ಪರಿಹಾರ ಘೋಷಿಸಿಲ್ಲ ಎಂದು ಹೇಳಿದರು.

Related posts

Leave a Reply