Header Ads
Header Ads
Breaking News

ಅಪನಂಬಿಕೆಯಿಂದಾಗಿ ಆಡಳಿತ ಪಕ್ಷದ ಸದಸ್ಯರೇ ತಿರುಗಿ ಬಿದ್ದಿದ್ದಾರೆ : ಡಿ.ಎಚ್. ಶಂಕರ ಮೂರ್ತಿ ಹೇಳಿಕೆ

ಬಂಟ್ವಾಳ: ರಾಜ್ಯ ಸರಕಾರದ ಆಡಳಿತ ಸರಿಯಾಗಿರಲಿಲ್ಲ. ಅವರ ಆಂತರಿಕ ಭಿನ್ನಮತ, ಕಚ್ಚಾಟ, ಅಪನಂಬಿಕೆಯಿಂದಾಗಿ ಆಡಳಿತ ಪಕ್ಷದ ಸದಸ್ಯರೇ ತಿರುಗಿ ಬಿದ್ದಿದ್ದಾರೆ. ಈ ಸರಕಾರದ ಜೊತೆ ನಾವಿರುವುದಿಲ್ಲ ಎಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಈ ದೋಸ್ತಿ ಸರಕಾರ ನಮಗೆ ಬೇಡ ಎನ್ನುವ ಸಂದೇಶ ಕರ್ನಾಟಕದ ಜನತೆಗೆ ತಲುಪಿದೆ ಎಂದು ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ಹೇಳಿದ್ದಾರೆ.
ಅವರು ಪೊಳಲಿ ಕ್ಷೇತ್ರದಲ್ಲಿ ಒಂದೇ ದೇಶ ಒಂದೇ ಶಿಕ್ಷಣ ಅಭಿಯಾನದಂಗವಾಗಿ ರಥಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು. ಬಿಜೆಪಿ ಶಾಸಕರು ಯಾರು ರಾಜಿನಾಮೆ ನೀಡಿಲ್ಲ, ರಾಜೀನಾಮೆ ಕೊಟ್ಟಿರುವವರು ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು, ಆದ್ದರಿಂದ ಅದಕ್ಕೂ ಬಿಜೆಪಿಗೂ ಸಂಬಂಧ ಇಲ್ಲ, ಅದು ಕಾಂಗ್ರೆಸ್ ಹಾಗೂ ಜೆಡಿಎಸ್ ಆಂತರಿಕ ಸಮಸ್ಯೆ,ಶಾಸಕರು ಯಾರೂ ರಾಜಿನಾಮೆಯನ್ನು ಗುಟ್ಟಾಗಿ ಕೊಟ್ಟಿಲ್ಲ, ಓಡೋಡಿ ಬಂದು ರಾಜಿನಾಮೆ ನೀಡಿದ್ದಾರೆ ಎಂದರು. ನಾಳೆ ವಿಶ್ವಾಸ ಮತ ನಡೆಯಲಿದ್ದು ಸಭಾಪತಿ ಸಮಯವಕಾಶ ಕೊಟ್ಟರೆ ಸರ್ಕಾರ ಮುಂದುವರೆಯುತ್ತದೆ, ಕಾಲವಕಾಶ ನೀಡದೆ ಇದ್ದರೆ ಈಗಿರುವ ಸರಕಾರ ರಾಜಿನಾಮೆ ನೀಡಿ ಹೊಸ ಸರಕಾರ ಅಸ್ಥಿತ್ವಕ್ಕೆ ಬರಲಿದೆ ಎಂದರು.

Related posts

Leave a Reply

Your email address will not be published. Required fields are marked *