Header Ads
Header Ads
Header Ads
Breaking News

ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಗೆ ಖಂಡನೆ ಪಡುಬಿದ್ರೆಯಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ

ರಾಜ್ಯದಲ್ಲಿನ ಹಿಂದೂ ವಿರೋಧಿ ನೀತಿ ಹಾಗೂ ಹಿಂದೂಗಳ ಹತ್ಯೆಯನ್ನು ಖಂಡಿಸಿ, ಪಡುಬಿದ್ರಿಯಲ್ಲಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಯಿತು.ಈ ವೇಳೆ ಕುತ್ಯಾರು ಪ್ರಸಾದ್ ಶೆಟ್ಟಿ ಮಾತನಾಡಿ, ರಾಜ್ಯ ಸರ್ಕಾರ, ಅಲ್ಪಸಂಖ್ಯಾತರ ಎಲ್ಲಾ ಅಕ್ರಮಗಳಿಗೆ ರಕ್ಷಣೆಯಾಗಿ ನಿಂತು ಹಿಂದುಗಳನ್ನು ವಂಚಿಸುತ್ತಿದ್ದಾರೆ, ಕೇವಲ ಅಲ್ಪಸಂಖ್ಯಾತರನ್ನು ಓಲೈಸಿ ಮತ್ತೊಮ್ಮೆ ರಾಜ್ಯದ ಗದ್ದಗೆ ಏರುತ್ತೇವೆ ಎಂಬ ಕನಸ್ಸಿದ್ದರೆ ಅದನ್ನು ಮರೆತುಬಿಡಿ. ಇದೀಗ ಹಿಂದುಗಳಾದ ನಾವು ಎಚ್ಚರಗೊಂಡಿದ್ದೇವೆ, ಮುಂದಿನ ಕೆಲವೇ ತಿಂಗಳಲ್ಲಿ ಬರಲಿರುವ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸಲಿದ್ದೇವೆ ಎಂದು ಅವ್ರು ಆಕ್ರೋಶ ವ್ಯಕ್ತಪಡಿಸಿದ್ರು.

ಈ ಸಂದರ್ಭ ಮಾಜಿ ಶಾಸಕ ಲಾಲಾಜಿ ಮೆಂಡನ್, ಶೀಲಾ ಶೆಟ್ಟಿ, ಪ್ರತೀಕ್ ಕೋಟ್ಯಾನ್, ಶಿಲ್ಪ ಸುವರ್ಣ, ನೀತಾ ಗುರುರಾಜ್ ಮುಂತಾದವರು ಉಪಸ್ಥಿತರಿದ್ದರು

Related posts

Leave a Reply