Header Ads
Header Ads
Breaking News

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೋಳಿ ಜಗಳ

 

ಬಸ್ಸಿಗೆ ಕಾರು ಅಡ್ಡವಿಟ್ಟು ನಡೆದ ನಡೆದ ಕೋಳಿ ಜಗಳದಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ಸುಮಾರು 20 ನಿಮಿಷ ಕಾಲ ಸಂಪೂರ್ಣ ಬಂದ್ ಆದ ಪರಿಣಾಮ ವಾಹನಗಳ ಸಾಲು ಮೈಲುದ್ಧ ಬೆಳೆದಿದ್ದು, ಪ್ರಯಾಣಿಕರು ಸಮಸ್ಯೆ ಅನುಭವಿಸಿದ ಘಟನೆ ಪಡುಬಿದ್ರಿ ಠಾಣಾ ವ್ಯಾಪ್ತಿಯ ಸೇತುವೆಯ ಬಳಿ ನಡೆದಿದೆ.ಟಿಎಂಟಿ ಖಾಸಗಿ ತಡೆ ರಹಿತ ಬಸ್ ಚಾಲಕ ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ, ಅನಗತ್ಯವಾಗಿ ಕರ್ಕಶ ಹಾರನ್ ಬಳಸಿ ಹಿಂಸೆ ನೀಡಿದ್ದನ್ನು ವಿರೋಧಿಸಿದ ಕಾರು ಪ್ರಯಾಣಿಕರು ರೊಚ್ಚಿಗೆದ್ದು, ಪಡುಬಿದ್ರಿ ಸೇತುವೆ ಸಮೀಪ ಬಸ್ಸಿಗೆ ಕಾರನ್ನು ಅಡ್ಡವಿಟ್ಟು ತಡೆದು ಬಸ್ ಚಾಲಕನನ್ನು  ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಬಸ್ ಚಾಲಕನ ಸಹಾಯಕ್ಕೆ ಬುಲೆಟ್ ಸವಾರನೋರ್ವ ಬಂದಾಗ ಕಾರು ಪ್ರಯಾಣಿಕರ ರೋಷ ಬುಲೆಟ್ ಸವಾರನತ್ತ ತಿರುಗಿ ಗಂಭೀರ ಬಿಸಿ ಬಿಸಿ ಚರ್ಚೆ ಹೆದ್ದಾರಿ ಮಧ್ಯದಲ್ಲೇ ನಡೆದಿದೆ.

 

Related posts

Leave a Reply