
ಪುತ್ತೂರು: ಪುತ್ತೂರು ನಗರ ಠಾಣೆಯ ಪೊಲೀಸ್ರು ಎರಡು ದಿನಗಳ ಹಿಂದೆ ಮಾದಕ ವಸ್ತು ಗಾಂಜಾ ಮಾಫಿಯಾ ಬಯಲಿಗೆಳೆದ ಬೆನ್ನಲ್ಲೇ ಸಂಪ್ಯ ಎಸ್.ಐ ಉದಯರವಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮತ್ತೊಂದು ಗಾಂಜಾ ಪ್ರಕರಣ ಪತ್ತೆಯಾಗಿದೆ. ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಪ್ರಕರಣವನ್ನು ಪತ್ತೆ ಮಾಡಿ ಗಾಂಜಾ ಸಹಿತ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಎಸ್ಪಿ ಬಿ.ಎಮ್.ಲಕ್ಷ್ಮೀಪ್ರಸಾದ್ ಅವರ ನಿರ್ದೇಶನಂತೆ ಎ.ಎಸ್ಪಿ ಲಖನ್ಸಿಂಗ್ ಯಾದವ್ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಅವರ ಮಾರ್ಗದರ್ಶನದಂತೆ ಸಂಪ್ಯ ಎಸ್.ಐ ಉದಯರವಿ ನೇತೃತ್ವದಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು. ರಿಕ್ಷಾವೊಂದರಲ್ಲಿ ಸುಳ್ಯಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗಾಂಜಾವನ್ನು ಆರ್ಯಾಪು ಗ್ರಾಮದ ಕಲ್ಲರ್ಪೆಯಲ್ಲಿ ಪತ್ತೆ ಮಾಡಿದ್ದಾರೆ.ಆರೋಪಿ ಮಂಗಳೂರು ಮಂಜನಾಡಿ ಕುಚ್ಚಿಗುಡ್ಡೆ ನಿವಾಸಿ ಫೈಝಲ್ ಅವರ ಪುತ್ರ ಹಾತಿಮ್(32ವ)ರವರನ್ನು ಬಂಧಿಸಿ, ಆತನಿಂದ ರೂ.42,600 ಮೌಲ್ಯದ 2.130 ಕಿ.ಗ್ರಾಂ ತೂಕದ ಗಾಂಜಾ, ರೂ5 ಸಾವಿರ ಮೌಲ್ಯದ ಐಪೊನ್, ಆತನಲ್ಲಿದ್ದ ರೂ.5,900 ನಗದು ಮತ್ತು ಕೃತ್ಯಕ್ಕೆ ಬಳಸಿದ ರೂ.1 ಲಕ್ಷ ಮೌಲ್ಯದ ಆಟೋ ರಿಕ್ಷಾ (ಕೆ.ಎ19:ಡಿ682)ವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಗಾಂಜಾ ಸಾಗಾಟ ಕುರಿತು ಖಚಿತ ಮಾಹಿತಿ ಪಡೆದುಕೊಂಡ ಪೊಲೀಸರು ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.ಈ ಸಂದರ್ಭದಲ್ಲಿ ಮಂಗಳೂರು ನೋಂದಣಿಯ ಅಟೋ ರಿಕ್ಷಾವನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ರಿಕ್ಷಾ ಚಾಲಕ ಹಾತಿಮ್ ಪರಾರಿಯಾಗಲು ಯತ್ನಿಸುತ್ತಿದ್ದಂತೆ ಪೊಲೀಸರು ಆತನನ್ನು ಸುತ್ತುವರಿದು ಹಿಡಿದಿದ್ದಾರೆ ಎಂದು ವರದಿಯಾಗಿದೆ.ಎಸ್.ಐ ಉದಯರವಿ ಅವರ ನೇತೃತ್ವದ ಕಾರ್ಯಾಚರಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಅದ್ರಾಮ, ಚಂದ್ರ, ಸಿಬ್ಬಂದಿಗಳಾದ ನಿತಿನ್, ವಿನೋದ್ ಭಾಗವಹಿಸಿದ್ದರು.