Header Ads
Header Ads
Breaking News

ರಿಕ್ಷಾ ಚಾಲಕನಿಂದ ಬಸ್ ಕಾರ್ಮಿಕನಿಗೆ ಹಲ್ಲೆ : ಮೀಯಪದವು – ಆನೆಕಲ್ಲು ರೂಟಿನಲ್ಲಿ ಪ್ರತಿಭಟನೆ

ಮೀಯಪದವು-ಆನೆಕಲ್ಲು ರೂಟಿನಲ್ಲಿ ಸಂಚರಿಸುತ್ತಿರುವ ಖಾಸಗಿ ಬಸ್‍ಗಳ ಕಾರ್ಮಿಕರು ದಿಢೀರ್ ಆಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಘಟನೆ ಮಂನಜೇಶ್ವರದಲ್ಲಿ ನಡೆದಿದೆ. ಆನೆಕಲ್ಲು ತಲಪಾಡಿ ರೂಟಿನಲ್ಲಿ ಸಂಚರಿಸುತಿದ್ದ ಆಂಜನೇಯ ಬಸ್ಸಿನ ಕಾರ್ಮಿಕನಿಗೆ ರಿಕ್ಷಾ ಚಾಲಕನೊಬ್ಬ ಅವಾಚ್ಯ ಶಭ್ದಗಳಿಂದ ನಿಂದಿಸಿ ಹಲ್ಲೆಗೈದಿರುವ ಹಿನ್ನೆಲೆಯಲ್ಲಿ ಖಾಸಗಿ ಬಸ್ಸುಗಳ ಕಾರ್ಮಿಕರು ದಿಢೀರ್ ಆಗಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿ ಆರೋಪಿಯ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಬಸ್ ಮಾಲಕರ ಸಂಘಟನೆ ಹಾಗೂ ಕಾರ್ಮಿಕರು ಮಂಜೇಶ್ವರ ಠಾಣಾಧಿಕರಿಗೆ ಮನವಿಯನ್ನು ನೀಡಿ ಒತ್ತಾಯಿಸಿದರು. ಮನವಿ ನೀಡುವ ಮೊದಲು ಬಸ್ ಕಾರ್ಮಿಕರು ಠಾಣಾ ಮುಂಭಾಗದಲ್ಲಿ ಒಟ್ಟು ಸೇರಿ ಪ್ರತಿಭಟನೆಯ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ರೂಟಿನಲ್ಲಿ ರಿಕ್ಷಾ ಚಾಲಕರು ಸರ್ವೀಸ್ ನಡೆಸುತ್ತಿರುವುದನ್ನು ಪ್ರಶ್ನಿಸಿರುವುದಕ್ಕೆ ಕೆಎಲ್ 14 ಎಕ್ಸ್ 3994 ಆಟೋ ರಿಕ್ಷಾದ ಚಾಲಕ ಬಸ್ ಕಾರ್ಮಿಕ ಖಾದರ್ ಎಂಬವರಿಗೆ ಹಲ್ಲೆಗೈದಿರುವುದಾಗಿ ಆರೋಪಿಸಲಾಗಿದೆ. ಆರೋಪಿಯ ವಿರುದ್ದ ಪೊಲೀಸರು ಕೇಸು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಠಾಣಾಧಿಕಾರಿ ಭರವಸೆ ನೀಡಿದ್ದಾರೆ. ಈ ಸಂದರ್ಭ ಸಂಘಟನೆಯ ಪದಾಧಿಕಾರಿಗಳಾದ ಸುಬ್ಬಣ್ಣ ಆಳ್ವ, ರಾಜೆಶ್, ಬಿಕೆ ಮೊಹಮ್ಮದ್, ಉಮೇಶ್ ಶೆಟ್ಟಿ, ಚಂದ್ರಹಾಸ ತಲಪಾಡಿ ಮೊದಲಾದವರು ಮುಂದಾಳತ್ವ ನೀಡಿದರು.

Related posts

Leave a Reply

Your email address will not be published. Required fields are marked *