Header Ads
Header Ads
Breaking News

’ರಿವೇರಾ 2ಕೆ19’ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಫೆಸ್ಟ್ : ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಕಾಲೇಜಿನಲ್ಲಿ ಆಯೋಜನೆ

ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಇದೀಗ ಹಬ್ಬದ ಸಂಭ್ರಮ.. ಕಾಲೇಜಿನಲ್ಲಿ ನಾನಾ ಬಗೆಯ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಫೆಸ್ಟ್ ನಡಿತಾ ಇದ್ದು ವಿದ್ಯಾರ್ಥಿಗಳಿಗಂತೂ ಎಲ್ಲಿಲ್ಲದ ಸಂಭ್ರಮ ಮನೆಮಾಡಿದೆ. ಹೌದು.. ಕಾಲೇಜಿನಲ್ಲಿ ’ರಿವೇರಾ 2ಕೆ19’ ಎಂಬ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಫೆಸ್ಟ್ ನಡಿತಾ ಇದ್ದು, ಎರಡನೇ ದಿನದಂದು ಕಾಲೇಜಿನಲ್ಲಿ ವೆಸ್ಟರ್ನ್ ಸಿಂಗಿಂಗ್ ಕಾಂಪಿಟೇಶನ್ ಸೇರಿದಂತೆ ನಾನಾ ಬಗೆಯ ಸ್ಪರ್ಧೆಗಳು ನಡೆಯಿತು.

 ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೇವಲ ಸಬ್ಜೆಕ್ಟ್‌ಗೆ ಸಂಬಂಧ ಪಟ್ಟ ಹಾಗೆ ಮಾತ್ರ ಕಾರ್ಯಕ್ರಮಗಳನ್ನು ಮಾಡೋದು ಹೆಚ್ಚು. ಹೀಗಿರುವಾಗ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಮನೋರಂಜನೆಯನ್ನು ನಿಡುವ ಉದ್ದೇಶದಿಂದ ಮತ್ತು ಸ್ಪರ್ಧಾತ್ಮಕ ಜಗತ್ತು ಹೇಗಿರುತ್ತೆ ಅನ್ನೋದರ ಅರಿವು ಮೂಡಿಸುವ ದೃಷ್ಠಿಯಿಂದ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಫೆಸ್ಟ್‌ನ್ನು ಆಯೋಜಿಸಿದ್ದಾರೆ.

 ಹೌದು ಇದೀಗ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದ ಈ ಸಂಸ್ಥೆ ಇದೀಗ ನಾನಾ ರೀತಿಯ ಮನೋರಂಜನಾ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸ್ತಾ ಇದ್ದು, ವಿದ್ಯಾರ್ಥಿಗಳಲ್ಲಿ ಬಾರೀ ಉತ್ಸಾಹ ಮೂಡಿಸಿದೆ. ಜೂನ್ 17ರಿಂದ ’ರಿವೇರಾ 2ಕೆ19’ ಎಂಬ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಫೆಸ್ಟ್ ನಡಿತಾ ಇದ್ದು, ಜೂನ್ ೨೨ರವರೆಗೆ ಬಹಳ ಅದ್ಧೂರಿಯಾಗಿ ನಡೆಯಲಿದೆ. 

 ಕಾಲೇಜಿನಲ್ಲಿ 2ನೇ ದಿನ ವೆಸ್ಟರ್ನ್ ಸಿಂಗಿಂಗ್ ಕಾಂಪಿಟೇಶನ್ ಸಿಂಗಲ್, ಡೂಯೆಟ್ ಹಾಗೂ ಗ್ರೂಪ್ ವಿಭಾಗಳಲ್ಲಿ ನಡೆಯಿತು. ಹಾಗೂ ಕಸದಿಂದ ರಸ ಎಂಬ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಕಲಾತ್ಮಕ ಶೈಲಿಯ ವಿವಿಧ ಕ್ರಾಪ್ಟ್ ತಯಾರಿಸಿ ನೋಡುಗರ ಗಮನ ಸೆಳೆದರು. ಈ ಸ್ಪರ್ಧೆಗಳಲ್ಲಿ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಸಂದರ್ಭ ಕಾರ್ಯಕ್ರಮದಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ರೆವರೆಂಡ್ ಫಾದರ್ ರೋಶನ್ ಕ್ರಾಸ್ತಾ, ಕಾರ್ಯಕ್ರಮದ ಸಂಯೋಜಕರಾದ ದೀಪಾ ಪಾಯಸ್ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *