Header Ads
Header Ads
Breaking News

’ರಿವೇರಾ 2ಕೆ19’ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಫೆಸ್ಟ್ : ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಕಾಲೇಜಿನಲ್ಲಿ ಕಾರ್ಯಕ್ರಮ

ಮಂಗಳೂರಿನ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ವತಿಯಿಂದ ’ರಿವೇರಾ 2ಕೆ19’ ಎಂಬ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಫೆಸ್ಟ್ ಆಯೋಜಿಸಲಾಗಿದ್ದು, ಮೂರನೇ ದಿನದಂದು ಕಾಲೇಜಿನ ಸಭಾಂಗಣದಲ್ಲಿ ಮ್ಯಾಡ್ ಆಡ್ಸ್ ಕಾಂಪಿಟೇಶನ್, ಸೋಫ್ ಕಾರ್ವಿಂಗ್, ಕಾಮಿಕ್ ಸ್ಟ್ರಿಪ್ ಎಂಬ ಸ್ಪರ್ಧೆಯನ್ನ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.

 ಮಂಗಳೂರಿನ ಹೆಸರಾಂತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ರಿವೇರಾ 2ಕೆ19 ಎಂಬ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಫೆಸ್ಟ್ ಹಮ್ಮಿಕೊಂಡಿದ್ದು,1 ವಾರಗಳ ಕಾಲ ಹೋಮಿಯೋಪಥಿಕ್ ವಿದ್ಯಾರ್ಥಿಗಳಾಗಿ ವಿವಿಧ ಸ್ಪರ್ಧೆಯನ್ನ ನಡೆಸಲಾಗುತ್ತಿದೆ. ಮೂರನೇ ದಿನದಂದು ಕಾಲೇಜಿನ ಸಭಾಂಗಣದಲ್ಲಿ ಮೇಡ್ ಆಡ್ಸ್ ಕಾಂಪಿಟೇಶನ್, ಸೋಫ್ ಕಾರ್ವಿಂಗ್, ಕಾಮಿಕ್ ಸ್ಟ್ರಿಪ್ ಎಂಬ ಸ್ಪರ್ಧೆ ನಡೆಯಿತು.

 ಮೇಡ್ ಆಂಡ್ ಕಾಂಪಿಟೇಶನ್‌ನಲ್ಲಿ ವಿದ್ಯಾರ್ಥಿಗಳು ಪ್ರೋಡೆಕ್ಟ್‌ನ ಬಗ್ಗೆ ಪ್ರಹಾಸನ ಮೂಲಕ ತಮ್ಮ ಪ್ರತಿಭೆಯನ್ನ ತೋರ್ಪಡಿಸಿದರು. ಸುಮಾರು ೫ಕ್ಕೂ ಅಧಿಕ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದರು, ಮಾತ್ರವಲ್ಲದೇ ಸೋಫ್ ಕಾರ್ವಿಂಗ್, ಕಾಮಿಕ್ ಸ್ಟ್ರಿಪ್ ಎಂಬ ಸ್ಪರ್ಧೆಯಲ್ಲಿ ಹಲವು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದರು. ವಿಜೇತ ತಂಡಗಳಿಗೆ ತೀರ್ಪುಗಾರರು ಪ್ರಶಸ್ತಿ ನೀಡಿ ಗೌರವಿಸಿದ್ರು. ಇನ್ನು 1ವಾರಗಳ ಕಾಲ ನಡೆಯಲಿರುವ ’ರಿವೇರಾ 2ಕೆ19’ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಫೆಸ್ಟ್‌ಯಲ್ಲಿ ನಾನಾ ಸ್ಪರ್ಧೆ ನಡೆಯಲಿದೆ.

Related posts

Leave a Reply

Your email address will not be published. Required fields are marked *