Header Ads
Header Ads
Breaking News

ರೆಡ್‌ಎಫ್‌ಎಂನಿಂದ ರೆಡ್ ಚಾಪು ವಿನೂತನ ಕಾರ್ಯಕ್ರಮ

 ಮಂಗಳೂರಿನ ಪ್ರತಿಷ್ಠಿತ ರೇಡಿಯೋ ಸ್ಟೇಶನ್‌ಗಳಲ್ಲಿ ಒಂದಾದ ರೆಡ್ ಎಫ್.ಎಮ್‌ನ ವತಿಯಿಂದ ರೆಡ್ ಚಾಪು ನಡೆಯಿತು. ಇದರಲ್ಲಿ ಬೆಸ್ಟ್ ಹೋಟೆಲ್ ಆಗಿ ಬಂದರ್‌ನ ಬಾಂಬೆ ಲಕ್ಕಿ ರೆಸ್ಟೋರೆಂಟ್ ಆಯ್ಕೆಯಾಗಿದೆ. ಕರಾವಳಿ ಕರ್ನಾಟಕದ ಹೆಸರಾಂತ ಎಫ್ ಎಮ್ ರೇಡಿಯೋ ಸ್ಟೇಷನ್‌ಗಳಲ್ಲಿ ಒಂದಾದ ರೆಡ್ ಎಫ್‌ಎಂ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದು ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ರೆಡ್ ಎಫ್.ಎಮ್‌ನಿಂದ ರೆಡ್ ಚಾಪು ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.ಇದರ ಮೊದಲ ಭಾಗವಾಗಿ ಬೆಸ್ಟ್ ಬಿರಿಯಾನಿ ಇನ್ ಮ್ಯಾಂಗ್ಲೂರ್ನಲ್ಲಿ ಜನ ಓಟ್ ಮಾಡಿ ಅಭಿಪ್ರಾಯವನ್ನು ತಿಳಿಸಿದ್ದರು.

 

ಇದರಲ್ಲಿ ಬಂದರ್‌ನ ’ಬೊಂಬೇ ಲಕ್ಕಿ ರೆಸ್ಟೋರೆಂಟ್’, ಬೆಸ್ಟ್ ಬಿರಿಯಾನಿ ಎಂದು ಆಯ್ಕೆ ಮಾಡಿದ್ದಾರೆ. ಎರಡನೇ ವಿಭಾಗದಲ್ಲಿ ಬೆಸ್ಟ್ ಫಿಶ್ ಫ್ರೈ ಇನ್ ಮ್ಯಾಂಗ್ಲೂರ್ ಆಯ್ಕೆ ನಡೆಯಿತು. ಇದರಲ್ಲಿ ’ಕಾರ್‌ಸ್ಟ್ರೀಟ್‌ನ ಗಿರಿಮಂಜಾಸ್’, ’ಕೊಡಿಯಾಲ್‌ಬೈಲ್‌ನ ಮಚಿಲಿ’, ಹಾಗೂ ’ಕೊಡಿಯಾಲ್‌ಬೈಲ್‌ನ ಮೀನು ಊಟದ ಮನೆ’ ನೋಮಿನೇಟ್ ಆಗಿರುವ ಹೋಟೆಲ್‌ಗಳಾಗಿದೆ.ಈಗಾಗಲೇ ಮಂಗಳೂರಿನ ಮೂರು ಹೋಟೆಲ್‌ಗಳ ರೆಡ್‌ಎಫ್‌ಎಂ ತಂಡದ ಆರ್‌ಜೆಗಳು ಭೇಟಿ ನೀಡಿ ಫುಡ್‌ಗಳನ್ನು ಸವಿದಿದ್ದಾರೆ. ಈ ಸಂದರ್ಭ ರೆಡ್ ಎಫ್.ಎಮ್‌ನ ಆರ್.ಜೆ ಗಳಾದ ಆರ್.ಜೆ ತ್ರಿಶೂಲ್, ಆರ್.ಜೆ ಪ್ರಸನ್ನ ಮತ್ತು ಆರ್.ಜೆ ನಯನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.ಮಂಗಳೂರಿನ ಜನತೆ ಕೂಡ ’ರೆಡ್ ಎಫ್.ಎಮ್ ಇಂಡಿಯ’ ಆಪ್ ಡೌನ್‌ಲೊಡ್ ಮಾಡಿ ಓಟ್ ಮಾಡಬಹುದು.

Related posts

Leave a Reply