
ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ 93.5ರೆಡ್ಎಫ್ಎಮ್ ನೇತೃತ್ವದಲ್ಲಿ ರೆಡ್ ಸುರಕ್ಷಾ ಅಭಿಯಾನ ಆರಂಭಿಸಿದ್ದಾರೆ. ಇದೊಂದು ರೆಡ್ಎಫ್ಎಮ್ನವರ ಮತ್ತೊಂದು ಕಾರ್ಯಕ್ರಮವಾಗಿದ್ದು ಹೆಲ್ಮೇಟ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಮಂಗಳೂರು ಪೊಲೀಸ್ ಕಮೀಷನರ್ ಹಾಗೂ ರೆಡ್ ಎಫ್.ಎಮ್ 93.5 ನೇತೃತ್ವದಲ್ಲಿ ರೆಡ್ ಸುರಕ್ಷ ಅಭಿಯಾನ ಆಯೋಜಿಸಿದ್ದು, ನಗರದ ಸ್ಟೇಟ್ ಬ್ಯಾಂಕ್ ಹಾಗೂ ಸಿಟಿ ಸೆಂಟರ್ ಬಳಿ ರೆಡ್ ಸುರಕ್ಷ ಅಭಿಯಾನ ನಡೆಸಲಾಯ್ತು. ಇನ್ನು ಟ್ರಾಫಿಕ್ ಎಸಿಪಿ ಮಂಜುನಾಥ್ ಶೆಟ್ಟಿ ಅವರು ಅಭಿಯಾನಕ್ಕೆ ಚಾಲನೆ ನೀಡಿದ್ರು. ಐಎಸ್ಐ ಮಾರ್ಕ್ ಇಲ್ಲದ ಹೆಲ್ಮಟ್ಗಳ ಹಾಕಬಾರದೆಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯ್ತು. ಹೆಲ್ಮಟ್ಗಳಲ್ಲಿ ಐಎಸ್ಐ ಮಾರ್ಕ್ ಇಲ್ಲದವರಿಗೆ ಹೆಲ್ಮಟ್ ವಿತರಿಸಲಾಯ್ತು.
ಈ ವೇಳೆ ಮಾತನಾಡಿದ ಟ್ರಾಫಿಕ್ ಎಸಿಪಿ ಮಂಜುನಾಥ್ ಶೆಟ್ಟಿ ಅವರು, ಐಎಸ್ಐ ಮಾರ್ಕ್ ಇಲ್ಲದ ಹೆಲ್ಮಟ್ಗಳನ್ನು ಹಾಕಬಾರದು.ಇದರಿಂದಾಗಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಿದರು.
ಈ ವೇಳೆ ಟ್ರಾಫಿಕ್ ಇನ್ಸ್ಪೆಕ್ಟರ್ ಶಿವಪ್ರಸಾದ್ ,ರೆಡ್ ಎಫ್ ಎಂ ಆರ್.ಜೆಗಳಾದ ಪ್ರಸನ್ನ, ತ್ರಿಶುಲ್, ನಯನ, ರೆಡ್ ಎಫ್ ಎಂ ಸ್ಟೇಷನ್ ಹೆಡ್ ಶೋಭಿತ್ ಮತ್ತಿತರರು ಉಪಸ್ಥಿತರಿದ್ದರು.