
ಮಂಗಳೂರಿನ ಪ್ರತಿಷ್ಠಿತ ರೇಡಿಯೋ ಸ್ಟೇಷನ್ಗಳಲ್ಲಿ ಒಂದಾದ 93.5 ರೆಡ್ಎಫ್ ಮತ್ತು ಹೆಚ್ಡಿಎಫ್ಸಿ ಬ್ಯಾಂಕ್ ಸಹಯೋಗದೊಂದಿಗೆ ಕೋವಿಡ್ ಜಾಗೃತಿ ಬಗೆಗೆ ಸಹಿ ಅಭಿಯಾನ ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಜರುಗಿತು.ಕೋವಿಡ್ ಮಹಾಮಾರಿಯ ಜಾಗೃತಿ ಎಲ್ಲರಿಗೂ ತಿಳಿಯಬೇಕು ಎಂಬ ಉದ್ದೇಶದಿಂದ ರೆಡ್ಎಫ್ಎಂ ಮತ್ತು ಹೆಚ್ಡಿಎಫ್ಸಿ ಬ್ಯಾಂಕ್ ಸಹಯೋಗದೊಂದಿಗೆ ಕೋವಿಡ್ ಜಾಗೃತಿ ಸಹಿ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಕೋವಿಡ್ ಜಾಗೃತಿ ಬಗೆಗಿನ ಸಹಿ ಅಭಿಯಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು ಸಹಿ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಮಾತನಾಡಿದ ಅವರು, ಕೋವಿಡ್ಗೆ ಎಲ್ಲರು ಭಯಪಡುವಂತಹ ವಾತಾವರಣ ನಿರ್ಮಾಣವಾಗಿತ್ತು. ಎಲ್ಲರೂ ಮಾಸ್ಕ್ನ್ನು ಕಡ್ಡಾಯವಾಗಿ ಬಳಸಿಕೊಳ್ಳಿ ಎಂದು ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿಕೊಂಡರು.ಆನಂತರ ಹೆಚ್ಡಿಎಫ್ ಬ್ಯಾಂಕ್ನ ಬ್ರಾಂಚ್ ಮ್ಯಾನೇಜರ್ ಸನ್ನಿ ಅವರು ಮಾತನಾಡಿ, ಕೋವಿಡ್ ಬಗ್ಗೆ ಎಲ್ಲರೂ ಜಾಗೃತರಾಗಿರಿ. ಸಾಮಾಜಿಕ ಅಂತರ ಕಾಪಾಡಿಕೊಂಡ ಮಾಸ್ಕ್ ಮತ್ತು ಸ್ಯಾನಿಟೈಸರನ್ನು ಬಳಸುವುದು ಅತಿ ಮುಖ್ಯ ಎಂದು ಹೇಳಿದರು.ಈ ಸಂದರ್ಭ ರೆಡ್ಎಫ್ಎಂನ ಸ್ಟೇಷನ್ ಹೆಡ್ ಶೋಭಿತ್, ಆರ್ಜೆ. ಪ್ರಸನ್ನ, ಸಿಬ್ಬಂದಿ ವರ್ಗದವರು ಹಾಗೂ ಹೆಚ್ಡಿಎಫ್ಸಿ ಬ್ಯಾಂಕ್ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.