Header Ads
Header Ads
Breaking News

ರೈತರ ಖಾತೆಗೆ ಜಮೆ ಆಗದ ಸಾಲಮನ್ನಾ ಮೊತ್ತ : ರೈತ ಸಂಘದ ವತಿಯಿಂದ ನಡೆದ ಪ್ರತಿಭಟನೆ

ಸುಳ್ಯ: ಹಿಂದಿನ ಸಮ್ಮಿಶ್ರ ಸರಕಾರ ಮಾಡಿದ್ದ ಸಾಲ ಮನ್ನಾ ಮೊತ್ತವು ರೈತರ ಖಾತೆಗೆ ಜಮೆ ಆಗದೇ ಇರುವುದನ್ನು ಪ್ರತಿಭಟಿಸಿ ರೈತರ ಸಂಘದ ವತಿಯಿಂದ ಸುಳ್ಯ ತಾಲೂಕಿನ ಆಲೆಟ್ಟಿ ಸಹಕಾರಿ ಸಂಘದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಯಂ.ವೆಂಕಪ್ಪ ಗೌಡ 15 ದಿನಗಳ ಒಳಗಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡದಿದ್ದರೆ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಈಗಿನ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವುದು ಬಿಡಿ ಹಿಂದಿನ ಸರ್ಕಾರಗಳು ನೀಡಿದ ಹಣವನ್ನು ತಲುಪಿಸುವ ಪ್ರಯತ್ನವನ್ನಾದರೂ ಮಾಡಲೀ. ಸರಕಾರಕ್ಕೆ, ಸಹಕಾರಿ ಸಂಘಗಳಿಗೆ ರೈತರ ಬಗ್ಗೆ ಕಾಳಜಿಯಿದ್ದರೆ ರೈತರ ಖಾತೆಗೆ ಹಣ ತುಂಬುವ ಪ್ರಯತ್ನವನ್ನು ಮಾಡುತ್ತೇವೆಂದು ರೈತರ ಮುಂದೆ ಪ್ರಮಾಣವನ್ನು ಮಾಡಲೀ ಎಂದು ಸವಾಲೆಸದರು. ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ವಕೀಲ ಧರ್ಮಪಾಲ ಕೊಯಿಂಗಾಜೆ, ಹರೀಶ್ ಕೊಯಿಂಗಾಜೆ, ಗಿರಿಜಾಶಂಕರ್ ತುದಿಯಡ್ಕ ಮತ್ತಿತರ ಪ್ರಮುಖರು ಹಾಜರಿದ್ದರು.

Related posts

Leave a Reply

Your email address will not be published. Required fields are marked *