
ಕಳೆದ 42 ದಿನಗಳಿಂದ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟವನ್ನು ಬೆಂಬಲಿಸಿ ಟಿಕ್ರಿ ಗಡಿಯಲ್ಲಿ ವೈದ್ಯಕೀಯ ಶಿಬಿರವನ್ನು ನಡೆಸುತ್ತಿರುವ ಕ್ಯಾಲಿಪೋರ್ನಿಯಾದಿಂದ ಬಂದ ಡಾ. ಸ್ವೈಮಾನ್ ಸಿಂಗ್. ಎಲ್ಲಾ ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಬಳಸಿ ಹೋರಾಟ ನಿರತ ರೈತರಿಗೆ ವೈದ್ಯಕೀಯ ಸೇವೆಯನ್ನು ನೀಡುತ್ತಿದ್ದಾರೆ. ರೈತ ಹೋರಾಟ ಒಂದು ತಾರ್ಕಿಕ ಒಂದು ತಾರ್ಕಿಕ ಅಂತ್ಯ ಕಾಣುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದಿದ್ದಾರೆ.
ಕರ್ನಾಟಕದ ನಂಟು ಇರುವ ಸ್ವೈಮಾನ್ ಸಿಂಗ್ ಉಡುಪಿಯ ಮಣಿಪಾಲ್ ವೈದ್ಯಕೀಯ ಸಂಸ್ಥೆಯಲ್ಲಿ ಎರಡು ವರ್ಷ ವೈದ್ಯಕೀಯ ವ್ಯಾಸಂಗ ಮಾಡಿರುವ ಇವರು ಪ್ರಸ್ತುತಕ್ಯಾಲಿಪೋರ್ನಿಯಾಯಾದಲ್ಲಿ ನೆಲೆಸಿದ್ದಾರೆ. ಮೂಲತಃ ಪಂಜಾಬಿನವರಾದ ಇವರು ರೈತ ಹೋರಾಟವನ್ನು ಬೆಂಬಲಿಸಿ, ತನ್ನ ಸಹೋದ್ಯೋಗಿಗಳೊಂದಿಗೆ ಟಿಕ್ರಿ ಗಡಿಯಲ್ಲಿ ರೈತರಿಗೆ ವೈದ್ಯಕೀಯ ಸಹಾಯ ಮಾಡುತ್ತಿದ್ದಾರೆ.
ವರದಿ : ಮಾಸ್ ಮೀಡಿಯಾ ಫೌಂಡೇಶನ್