Header Ads
Header Ads
Breaking News

ರೋಟರಿ ಕ್ಲಬ್ ಬಂಟ್ವಾಳ ಟೌನ್‌ನ ಪದಗ್ರಹಣ ಸಮಾರಂಭ

ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ನೂತನ ಅಧ್ಯಕ್ಷ ಹಾಗೂ ಪಾಧಿಕಾರಿಗಳ ಪದಗ್ರಹಣ ಸಮಾರಂಭ ಬಿ.ಸಿ.ರೋಡಿನ ಹೊಟೇಲ್ ರಾಜಾಂಗಣದಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಜಯರಾಜ್ ಎಸ್. ಬಂಗೇರ, ಕಾರ್ಯದರ್ಶಿಯಾಗಿ ಪಲ್ಲವಿಕಾರಂತ್, ಕೊಶಾಧಿಕಾರಿಯಾಗಿ ಹಾಗೂ ಇತರ ಪದಾಧಿಕಾರಿಗಳು ಪದಗ್ರಹಣ ಸ್ವೀಕರಿಸಿದರು.ನೂತನ ಅಧ್ಯಕ್ಷ ಜಯರಾಜ್ ಎಸ್ ಬಂಗೇರ ಮಾತನಾಡಿ ಜಿಲ್ಲಾ ಗವರ್ನರ್ ಅವರ ಜೀವನ ಸಂಧ್ಯಾ ಕಾರ್ಯಕ್ರಮದ ಮೂಲಕ ವೃದ್ದಾಶ್ರಮಗಳಿಗೆ ಸವಲತ್ತುಗಳನ್ನು ಒದಗಿಸುವ ಕಾರ್ಯ ವನ್ನು ಮಾಡಲಿದ್ದೇವೆ. ಜೊತೆಗೆ ಎಲ್ಲರ ಸಹಕಾರದೊಂದಿಗೆ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸುವುದಾಗಿ ತಿಳಿಸಿದರು.ನಿರ್ಗಮನ ಅಧ್ಯಕ್ಷ ಉಮೇಶ್ ನಿರ್ಮಲ್ ದಂಪತಿಯನ್ನು ಸನ್ಮಾನಿಸಲಾಯಿತು.

ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿದ್ದ ಪೂರ್ವ ಗವರ್ನರ್ ಡಾ. ಆರ್. ಎಸ್. ನಾಗಾರ್ಜುನ ಮಾತನಾಡಿ ಸೇವೆ ಮತ್ತು ವ್ಯವಹಾರ ವೃದ್ದಿ ರೋಟರಿ ಕ್ಲಬ್ ನಿಂದ ಸಾಧ್ಯವಿದೆ. ರೋಟರಿಯ ಅಂತರಾಷ್ಟ್ರೀಯ ಅಧ್ಯಕ್ಷರಿಗೆ ವಿಶ್ವ ಸಂಸ್ಥೆಯಲ್ಲಿ ಮಾತನಾಡುವ ಅವಕಾಶ ಕಲ್ಪಿಸಿರುವುದು ರೋಟರಿ ಕ್ಲಬ್ಗ್ಗೆ ಜಾಗತಿಜವಾಗಿರುವ ಮಹತ್ವವನ್ನು ತಿಳಿಸುತ್ತದೆರೋಟರಿಯ ಸಂಬಂಧ ಮರದ ಬೇರಿನಂತೆ ಪರಸ್ಪರ ಒಂದನ್ನೊಂದು ಬೆಸೆದುಕೊಂಡಿರುತ್ತದೆ ಎಂದರು. ವೇದಿಕೆಯಲ್ಲಿ ಸಹಾಯಕ ಗವರ್ನರ್ ಪ್ರಕಾಶ್ ಕಾರಂತ್, ನಿಯೋಜಿತ ಸಹಾಯಕ ಗವರ್ನರ್ ರಿತೇಶ್ ಬಾಳಿಗ, ವಲಯ ಲೆಫ್ಟಿನೆಂಟ್ ಮಂಜುನಾಥ ಆಚಾರ್ಯ ಕಾರ್ಯದರ್ಶಿ ಪಲ್ಲವಿ ಕಾರಂತ ವೇದಿಕೆಯಲ್ಲಿ ಉಪಸ್ಥಿತರಿದ್ದರು. 22 ಮಂದಿ ನೂತನ ಸದಸ್ಯರು ಈ ಸಂದರ್ಭ ಸೇರ್ಪಡೆಗೊಂಡರು.

ಸಾಧಕ ವಿದ್ಯಾರ್ಥಿಗಳಾದ ಕೌಶಿಕ್, ಜಯಗೋಂವಿಂದ ಅವರನ್ನು ಸನ್ಮಾನಿಸಲಾಯಿತು. ಇಂಟರಾಕ್ಟ್ ಕ್ಲಬ್ ನ ಸಾಧಕರನ್ನು ಗೌರವಿಸಲಾಯಿತು. ಕ್ಲಬ್ ಬುಲೆಟಿನ್ ನ್ನು ವಲಯ ೪ ರ ನಿಯೋಜಿತ ಗವರ್ನರ್ ರಿತೇಶ್ ಬಾಳಿಗ ಬಿಡುಗಡೆಗೊಳಿಸಿದರು.

Related posts

Leave a Reply

Your email address will not be published. Required fields are marked *