Header Ads
Breaking News

ಲಾಕ್‍ಡೌನ್‍ನಿಂದ ಪುತ್ತೂರು ಪಟ್ಟಣ ಪ್ರದೇಶ ಅಕ್ಷರಶಃ ಸ್ತಬ್ಧ

ಜಗತ್ತಿನಾದ್ಯಾಂತ ಕಾಡುತ್ತಿರುವ ಮಾರಕ ಕೊರೊನ ವೈರಸ್ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮುಂದಿನ ನಾಲ್ಕು ರವಿವಾರಗಳು ಸಂಪೂರ್ಣ ಲಾಕ್‍ಡೌನ ಆದೇಶದ ಹಿನ್ನೆಲೆಯಲ್ಲಿ ಮೊದಲ ರವಿವಾರ ಜು.5ರಂದು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಹಾಲು, ಮೆಡಿಕಲ್, ಆಸ್ಪತ್ರೆ, ಪತ್ರಿಕೆ ಬಿಟ್ಟು ಉಳಿದೆಲ್ಲಾ ವ್ಯವಹಾರಗಳು ಅಂಗಡಿಗಳು ಸ್ಥಗಿತಗೊಂಡಿತ್ತು.


ಮುಂಜಾನೆ ಬೆರೆಳೆಣಿಕೆ ವಾಹನಗಳ ಮತ್ತು ಸಾರ್ವಜನಿಕರ ಓಡಾಟವಿತ್ತು. ಮಾಂಸದ ಅಂಗಡಿಗಳು, ತರಕಾರಿ ಅಂಗಡಿಗಳು, ಕೆಲವು ಕಡೆ ಹೊಟೇಲ್‍ಗಳು ತೆರೆದಿದ್ದರೂ, ಬೆಳಿಗ್ಗೆ ಗಂಟೆ 9 ಆಗುತ್ತಿದ್ದಂತೆ ಅವೆಲ್ಲವೂ ಬಂದ್ ಆಗಿತ್ತು. ಹಾಲು, ಮೆಡಿಕಲ್ ಶಾಪ್‍ಗಳು, ಪತ್ರಿಕಾ ವಿತರಣಾ ಅಂಗಡಿಗಳು, ಆಸ್ಪತ್ರೆಗಳು ತೆರೆದಿದ್ದವು, ಅಗತ್ಯ ಗೂಡ್ಸ್ ವಾಹನಗಳು ಸಂಚಾರ ನಡೆಸುತ್ತಿದ್ದವು. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸರು ಪಹರೆ ನೀಡುತ್ತಿದ್ದಾರೆ. ನಗರದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ ಒಳ ರಸ್ತೆಗಳೂ ಬಹುತೇಕ ನಿರ್ಜನವಾಗಿತ್ತು. ಪ್ರಮುಖ ರಸ್ತೆಗಳಲ್ಲಿ ಕೆಲವೊಂದು ಸರಕು ಸಾಗಾಣಿಕೆಯ ವಾಹನ ಓಡಾಟ ಕಾಣುತ್ತಿತ್ತು. ದರ್ಬೆ, ಕೆಮ್ಮಾಯಿ, ಬೈಪಾಸ್ ರಸ್ತೆ, ಹಾರಾಡಿ, ಸಾಲ್ಮರ ಕ್ರಾಸ್, ನೆಹರುನಗರ, ಕಬಕ ಕಡೆಗಳಲ್ಲಿ ಪೊಲೀಸರು ಪಹರೆ ಕಾಯುತ್ತಿದ್ದರು. ಒಟ್ಟಿನಲ್ಲಿ ಭಾನುವಾರದ ಲಾಕ್‍ಡೌನ್‍ನಿಂದ ಪುತ್ತೂರು ಪಟ್ಟಣ ಪ್ರದೇಶ ಅಕ್ಷರಶಃ ಸ್ತಬ್ಧವಾಗಿದೆ.

Related posts

Leave a Reply

Your email address will not be published. Required fields are marked *