

ಕಾಪುವಿನಲ್ಲಿ ಲೂನಾ ವಾಹನ ಮತ್ತು ಟೆಂಪೋ ಟ್ರಾವೆಲ್ಲರ್ ಮಧ್ಯೆ ನಡೆದ ಅಪಘಾತವೊಂದರಲ್ಲಿ ಲೂನಾ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಇನ್ನು ಹತ್ತಾರು ಮಂದಿ ಮಹಿಳೆಯರು ಪ್ರಯಾಣಿಸುತ್ತಿದ್ದ ಟೆಂಪೋ ಟ್ರಾವೆಲ್ಲರ್ ತಗ್ಗು ಪ್ರದೇಶದಲ್ಲಿ ವಾಲಿ ನಿಂತಿದ್ದು, ಮುಗುಚಿ ಬೀಳುತ್ತಿದ್ದರೆ ದುರಂತ ಸಂಭವಿಸುವ ಸಾಧ್ಯತೆ ಇತ್ತು ಎನ್ನುತ್ತಾರೆ ಘಟನಾ ಸ್ಥಳದಲ್ಲಿ ಸೇರಿದ ಮಂದಿ.ಗಾಯಗೊಂಡವರು ಲೂನಾ ಸವಾರ ಸ್ಥಳೀಯ ನಿವಾಸಿ ಹರೀಶ್ ಆಚಾರಿ (45).ಎಂದು ತಿಳಿದು ಬಂದಿದೆ.ಕೇರಳದಿಂದ ಕೊಲ್ಲೂರಿಗೆ ಟೆಂಪೋ ಟ್ರಾವೆಲ್ಲರ್ ಕಾಪುವಿನಲ್ಲಿ ಲೂನಕ್ಕೆ ಡಿಕ್ಕಿಯಾಗಿ ಸುಮಾರು ಹದಿನೈದು ಅಡಿ ಲೂನವನ್ನು ಎಳೆದುಕೊಂಡು ಹೋಗಿ ಸುಮಾರು ಹತ್ತು ಅಡಿ ಆಳದ ತಗ್ಗಿಗೆ ಬಹುತೇಕ ವಾಲಿ ನಿಂತಿದೆ. ಅಪಘಾತಕ್ಕೆ ತುತ್ತಾದ ಲೂನ ವಿರುದ್ಧ ದಿಕ್ಕಿನಿಂದ ಬರುತ್ತಿತ್ತೋ ಇಲ್ಲ ಹಿಂದಿನಿಂದ ಬಂದು ಟೆಂಪೋ ಟ್ರಾವೆಲ್ಲರ್ ಡಿಕ್ಕಿಯಾಗಿದೆಯೇ ಪೊಲೀಸ್ ತನಿಖೆಯಿಂದ ತಿಳಿದು ಬರ ಬೇಕಾಗಿದೆ. ಇತ್ತೀಚಿನ ದಿನದಲ್ಲಿ ಡೈವ?ನ್ ಹತ್ತಿರದಲ್ಲೇ ಇದ್ದರು ವಿರುದ್ಧ ದಿಕ್ಕಿನಿಂದ ಸಾಗುತ್ತಿರುವವರ ಸಂಖ್ಯೆ ಅಧಿಕವಾಗುತ್ತಿದ್ದು, ಅಪಘಾತಗಳ ಪ್ರಮಾಣವೂ ಹೆಚ್ಚಳವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.