Header Ads
Header Ads
Breaking News

ಲೋಕಕಲ್ಯಾಣಾರ್ಥವಾಗಿ ನಡೆದ ಬ್ರಹ್ಮಲಿಂಗನ ಸನ್ನಿಧಿಗೆ ಹಿಂಜಾವೇ ಕಾರ್ಯಕರ್ತರ ಪಾದಯಾತ್ರೆ

ಕುಂದಾಪುರ: ಲೋಕಕಲ್ಯಾಣಾರ್ಥವಾಗಿ ಹಿಂದೂಜಾಗರಣ ವೇದಿಕೆ ಗಂಗೊಳ್ಳಿಯ ಕಾರ್ಯಕರ್ತರು ಸೋಮವಾರ ಬೆಳಿಗ್ಗೆ ಗಂಗೊಳ್ಳಿಯಿಂದ ಸುಮಾರು 26 ಕಿಲೋಮೀಟರ್ ದೂರವಿರುವ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರನ ಸನ್ನಿಧಿಯವರೆಗೂ ಪಾದಯಾತ್ರೆ ನಡೆಸಿದರು.ಕರಾವಳಿ ಭಾಗದ ಮತ್ಸ್ಯ ಕ್ಷ್ಯಾಮ ನಿವಾರಣೆಯಾಗಿ ಮತ್ಸ್ಯ ಸಂಪತ್ತು ಸಮೃದ್ಧಿಯಾಗಲಿ, ಪಾಕೃತಿಕ ವಿಕೋಪ ಕಡಿಮೆಯಾಗಲಿ, ಮೀನುಗಾರಿಕೆ ತೆರಳಿದ ಮೀನುಗಾರರು ಸುರಕ್ಷಿತರಾಗಿರಲಿ, ಗೋ ಸಂತತಿ ರಕ್ಷಣೆಗಾಗಿ, ಹಾಗೂ ಹಿಂದೂ ಸಮಾಜ ಒಗ್ಗಟ್ಟಿನಿಂದ ಇರಬೇಕೆಂಬ ಉದ್ದೇಶದಿಂದ ಈ ಪಾದಯಾತ್ರೆ ನಡೆಸಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಸುಮಾರು ಇನ್ನೂರಕ್ಕೂ ಅಧಿಕ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಘೊಂಡಿದ್ದು ಬ್ರಹ್ಮಲಿಂಗನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಲ್ಲಿನ ಪ್ರಸಾದವನ್ನು ಗಂಗೊಳ್ಳಿಗೆ ತಂದು ಸಮುದ್ರ ರಾಜನಿಗೆ ಅರ್ಪಣೆ ಮಾಡಿ ಪಾರ್ಥನೆಗೈದರು. ಹಿಂದು ಜಾಗರಣ ವೇದಿಕೆ ಉಡುಪಿ ಜಿಲ್ಲಾ ಉಪಾಧ್ಯಕ್ಷ ವಾಸು ದೇವಾಡಿಗ, ಗಂಗೊಳ್ಳಿ ಘಟಕದ ಪ್ರಧಾನ ಕಾರ್ಯದರ್ಶಿ ಯಶವಂತ ಗಂಗೊಳ್ಳಿ, ಬೈಂದೂರು ತಾಲೂಕು ಕಾರ್ಯಕಾರಿಣಿ ರತ್ನಾಕರ ಹಾಜರಿದ್ದರು.

Related posts

Leave a Reply

Your email address will not be published. Required fields are marked *