Header Ads
Breaking News

ಲೋಕಸಭಾ ಚುನಾವಣೆ ಹಿನ್ನೆಲೆ : ಜಿಲ್ಲಾದ್ಯಂತ ಬಸ್ ಸಂಚಾರ ವ್ಯತ್ಯಯ

ಲೋಕಸಭಾ ಚುನಾವಣೆಯ ಮೊದಲನೇ ಹಂತದ ಮತದಾನ ಹಿನ್ನೆಲೆಯಲ್ಲಿ ಚುನಾವಣ ಕಾಯ್ದೆ ನಿಮಿತ್ತ ರಾಜ್ಯದ 8705 ಕೆಎಸ್‍ಆರ್‍ಟಿಸಿ ಬಸ್ಸ್‍ಗಳ ಪೈಕಿ 3314 ಬಸ್‍ಗಳು ಚುನಾವಣ ಕಾರ್ಯಕ್ಕೆ ತೆರಳಲಿವೆ. ಸರಕಾರಿ ಬಸ್‍ಗಳನ್ನು ಚುನಾವಣೆಗೆ ಬಳಸಿಕೊಳ್ಳುವ ಹಿನ್ನೆಲೆಯಲ್ಲಿ ಬಸ್ ಸೇವೆ ವ್ಯತ್ಯಯವಾಗಲಿದೆ. ದೂರದ ಊರುಗಳಿಂದ ಮತದಾನಕ್ಕೆ ತಮ್ಮ ಊರುಗಳಿಗೆ ಬಂದ ಮಂದಿಗೆ ಸರಣಿ ರಜೆ ಸಿಗುತ್ತದೆ. ಎ.17ರಂದು ಮಹಾವೀರ ಜಯಂತಿ, ಎ.18ರಂದು ಚುನಾವಣೆ, ಎ.19ರಂದು ಗುಡ್ ಫ್ರೈಡೆ ರಜೆ, ಹೀಗೆ ಸರಣಿ ರಜೆಗಳು ಇರುವುದರಿಂದ ಈಗಾಗಲೇ ಹೆಚ್ಚಿನ ಬಸ್ ಮುಂಗಡ ಬುಕ್ಕಿಂಗ್ ಆಗಿದೆ. ಈ ಕಾರಣಕ್ಕಾಗಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವಂತಹ ಸಾರ್ವಜನಿಕರಿಗಾಗಿ ಇನ್ನು ಹೆಚ್ಚುವರಿ ಬಸ್‍ಗಳನ್ನು ನಿಯೋಜಿಸಲು ಕೆಎಸ್‍ಆರ್‍ಟಿಸಿ ತೀರ್ಮಾನಿಸಿದೆ. 

Related posts

Leave a Reply

Your email address will not be published. Required fields are marked *