Header Ads
Header Ads
Breaking News

ಲ್ಯಾಂಡ್ ಟ್ರೇಡ್ಸ್ ’ಪ್ರಾಪರ್ಟಿ ಶೋ 2019’ಗೆ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ : ನವೆಂಬರ್ 13ರವರೆಗೆ ಪ್ರಾಪರ್ಟಿ ಶೋ ವಿಸ್ತರಣೆ

ಮಂಗಳೂರು : ಕಟ್ಟಡ, ವಸತಿ ಸಮುಚ್ಚಯಗಳ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಬ್ರ್ಯಾಂಡ್ ಕ್ರಿಯೇಟ್ ಮಾಡಿರುವ ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ವತಿಯಿಂದ ನವೆಂಬರ್ 1ರಿಂದ ಆರಂಭಗೊಂಡಿದ್ದ ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಶೋ 2019ಗೆ ಜನತೆಯಿಂದ ಅಭೂತಪೂರ್ವವಾಗಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನವೆಂಬರ್ 10ರವರೆಗೆ ಪ್ರಾಪರ್ಟಿ ಶೋ ನಡೆಯುತ್ತಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಪ್ರಾಪರ್ಟಿ ಶೋವನ್ನು ಮತ್ತೆ ಮೂರು ದಿನಗಳ ಕಾಲ ವಿಸ್ತರಿಸಲಾಗಿದೆ. ನವೆಂಬರ್ 13ರವರೆಗೂ ಲ್ಯಾಂಡ್‌ಟ್ರೇಡ್ಸ್ ’ಪ್ರಾಪರ್ಟಿ ಶೋ 2019’ ಮುಂದುವರೆಯಲಿದೆ.

ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ವತಿಯಿಂದ ಮಂಗಳೂರಿನ ಹ್ಯಾಟ್‌ಹಿಲ್‌ನಲ್ಲಿರುವ ಲ್ಯಾಂಡ್ ಟ್ರೇಡ್ಸ್ ಸಾಲಿಟೇರ್‌ನಲ್ಲಿ ಪ್ರಾಪರ್ಟಿ ಶೋ 2019 ನಡೆಯುತ್ತಿದೆ. ಬೆಳಗ್ಗೆ 10ರಿಂದ ಸಂಜೆ 7ರವರೆಗೆ ಪ್ರಾಪರ್ಟಿ ಶೋ ನಡೆಯುತ್ತಿದ್ದು ಗ್ರಾಹಕರು ತಮ್ಮ ಮನೆಯ ಕನಸನ್ನು ನನಸಾಗಿಸಿಕೊಳ್ಳುವ ಅವಕಾಶ ಇದೀಗ ಮತ್ತೆ ಮೂರು ದಿನಗಳ ಕಾಲ ವಿಸ್ತರಣೆಯಾಗಿದೆ.

ಲ್ಯಾಂಡ್ ಟ್ರೇಡ್ಸ್ ಪ್ರಾಪರ್ಟಿ ಎಕ್ಸ್‌ಪೋದಲ್ಲಿ ಭಾಗವಹಿಸುವ ಗ್ರಾಹಕರಿಗೆ ಆಕರ್ಷಕ ಕೊಡುಗೆಗಳು ಕೂಡ ಕಾದಿವೆ. ಲ್ಯಾಂಡ್‌ಟ್ರೇಡ್ಸ್‌ನ ಕಂಪ್ಲೀಟೆಡ್ ಪ್ರಾಜೆಕ್ಟ್‌ಗಳಾದ ಲ್ಯಾಂಡ್‌ಟ್ರೇಡ್ಸ್ ಸಾಲಿಟೇರ್, ಎಮರಾಲ್ಡ್ ಬೇ, ಆನ್‌ಗೋಯಿಂಗ್ ಪ್ರಾಜೆಕ್ಟ್ ಆದ ಹ್ಯಾಬಿಟಾಟ್ ವನ್ ೫೪ನಲ್ಲಿ ತಮ್ಮ ಮನದಿಚ್ಛೆಯ ಫ್ಲ್ಯಾಟ್‌ಗಳನ್ನು ಬುಕ್ ಮಾಡುವ ಅವಕಾಶವಿದೆ.

ಲ್ಯಾಂಡ್‍ಟ್ರೇಡ್ಸ್ ಸಾಲಿಟೇರ್

ಲ್ಯಾಂಡ್‍ಟ್ರೇಡ್ಸ್ ಸಾಲಿಟೇರ್

ಲ್ಯಾಂಡ್‌ಟ್ರೇಡ್ಸ್ ಸಾಲಿಟೇರ್ ವಸತಿ ಸಮುಚ್ಚಯವು ಮಂಗಳೂರಿನ ಹ್ಯಾಟ್‌ಹಿಲ್‌ನ ವಿಶಾಲ, ಪ್ರಕೃತಿ ರಮಣೀಯ ಪರಿಸರದಲ್ಲಿ ತಲೆಯೆತ್ತಿದ್ದು, 32 ಮಹಡಿಗಳಲ್ಲಿ ಅತ್ಯಾಕರ್ಷಕವಾಗಿ ಫ್ಲ್ಯಾಟ್‌ಗಳು ನಿರ್ಮಾಣಗೊಂಡಿವೆ. ಸ್ವಿಮ್ಮಿಂಗ್ ಪೂಲ್ ಜೊತೆಗೆ ಕ್ಲಬ್ ಹೌಸ್, ಜಾಕುಝಿ, ಸಾನಾ, ಸ್ಟೀಮ್ ಬಾತ್, ಸಂಪೂರ್ಣ ಜಿಮ್ ಮತ್ತು ಒಳಾಂಗಣ ಕ್ರೀಡಾಂಗಣ ಇತ್ಯಾದಿ ಐಷಾರಾಮಿ ಸೌಕರ್ಯಗಳನ್ನು ಹೊಂದಿದೆ. ಅರಬೀ ಸಮುದ್ರದ ಸುಂದರ ವೀಕ್ಷಣೆಯ ಅವಕಾಶದ ಜೊತೆಗೆ 2ಬಿಹೆಚ್‌ಕೆ, 3 ಬಿಹೆಚ್‌ಕೆ, ಮತ್ತು 4 ಬಿಹೆಚ್‌ಕೆ ಲಕ್ಸುರಿ ಅಪಾರ್ಟ್‌ಮೆಂಟ್‌ಗಳ ಜೊತೆಗೆ 5 ಬಿಹೆಚ್‌ಕೆಯ ಡ್ಯೂಪ್ಲೆಕ್ಸ್‌ಗಳು ಸಾಲಿಟೇರ್‌ನಲ್ಲಿವೆ.

 

ಲ್ಯಾಂಡ್‍ಟ್ರೇಡ್ಸ್ ಹ್ಯಾಬಿಟ್ಯಾಟ್ ವನ್ 54

ಲ್ಯಾಂಡ್‍ಟ್ರೇಡ್ಸ್ ಹ್ಯಾಬಿಟ್ಯಾಟ್ ವನ್ 54

 

ಕೈಗೆಟುಕುವ ಬಜೆಟ್‍ನಲ್ಲಿ ಉತ್ಕಷ್ಟ ಗುಣಮಟ್ಟದ ಜೀವನಶೈಲಿಯನ್ನು ಒದಗಿಸಲು ಸಜ್ಜಾಗಿರುವುದು ಲ್ಯಾಂಡ್‍ಟ್ರೇಡ್ಸ್ ಹ್ಯಾಬಿಟ್ಯಾಟ್ ವನ್ 54. ನಗರದ ಸದ್ದು-ಗದ್ದಲದಿಂದ ದೂರದಲ್ಲಿ ದೇರೇಬೈಲ್‍ನಲ್ಲಿ ವಿಶಾಲವಾಗಿ ನಿರ್ಮಾಣಗೊಳ್ಳುತ್ತಿರುವ ಹ್ಯಾಬಿಟ್ಯಾಟ್ ವನ್ ಕುಟುಂಬ ಸ್ನೇಹಿ ವಾತಾವರಣವನ್ನು ಹೊಂದಿದೆ. ಜೊತೆಗೆ ಜೀವನವನ್ನು ಸುಖಮಯವನ್ನಾಗಿಸುವ ನಿಟ್ಟಿನಲ್ಲಿ ಅತ್ಯಾಧುನಿಕ ಫೀಚರ್‍ಗಳನ್ನು ಹೊಂದಿರಲಿದೆ.

 

ಎಮರಾಲ್ಡ್ ಬೇ

ಎಮರಾಲ್ಡ್ ಬೇ

ಎಮರಾಲ್ಡ್ ಬೇ – ಮಂಗಳೂರಿನ ಸುರತ್ಕಲ್ ಎನ್‍ಐಟಿಕೆ ಬೀಚ್‍ನ ಎದುರು ಸಿದ್ಧಗೊಂಡಿರುವ ವೆಲ್ ಪ್ಲ್ಯಾನ್‍ಡ್ ರೆಸಿಡೆನ್ಷಿಯಲ್ ಲೇಔಟ್. ಖಾಸಗಿ ಮನೆಗಳ ನಿರ್ಮಾಣಕ್ಕೆ ಹೇಳಿ ಮಾಡಿಸಿದಂತಿರುವ ಸೈಟ್‍ಗಳು ಸ್ಪಧಾತ್ಮಕ ದರದಲ್ಲಿ ಲಭ್ಯವಿದೆ. ವಿಶಾಲವಾದ ಸಂಪರ್ಕ ರಸ್ತೆಗಳು, ಕ್ಲಬ್‍ಹೌಸ್, ಕಿರಿಕಿರಿರಹಿತ ನೀರು ಪೂರೈಕೆ ಸೌಲಭ್ಯ, ಜೊತೆಗೆ ಅತ್ಯುತ್ತಮ ಪರಿಸರವನ್ನು ಹೊಂದಿಕೊಂಡಿರುವ ಎಮರಾಲ್ಡ್ ಬೇ ರೆಸಿಡೆನ್ಷಿಯಲ್ ಲೇಔಟ್ಸ್‍ನ ಬುಕಿಂಗ್ ಮೇಲೆ ಆಕರ್ಷಕ ಕೊಡುಗೆಗಳು ಲಭ್ಯವಿದೆ.

ಎಕ್ಸ್‍ಪೋದಲ್ಲಿ ಭಾಗವಹಿಸುವ ಗ್ರಾಹಕರಿಗೆ ಸ್ಪೆಷಲ್ ಡಿಸ್ಕೌಂಟ್ಸ್, ಹೌಸಿಂಗ್ ಫಿನಾನ್ಸ್ ಕೌಂಟರ್ ಜೊತೆಗೆ ಆನ್‍ಸ್ಪಾಟ್ ಬುಕಿಂಗ್ ಸೌಲಭ್ಯವೂ ಲಭಿಸಲಿದೆ. ಇವೆಲ್ಲವನ್ನೂ ಗಳಿಸಿಕೊಳ್ಳುವ ಜೊತೆಗೆ ಕನಸಿನ ಮನೆಯ ಕನಸನ್ನು ನನಸಾಗಿಸಿಕೊಳ್ಳಲು ಜನತೆಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಬುಕಿಂಗ್‍ಗಾಗಿ : 9880742159, 9845084866, 9886199769ನ್ನು ಸಂಪರ್ಕಿಸಬಹುದು. ಕಚೇರಿ ವಿಳಾಸ: ಫಸ್ಟ್ ಫ್ಲೋರ್, ನ್ಯೂ ಮಿಲಾಗ್ರಿಸ್ ಮ್ಯಾನ್ಷನ್, ಫಳ್ನೀರ್ ರೋಡ್, ಮಂಗಳೂರು : -575001

Related posts

Leave a Reply

Your email address will not be published. Required fields are marked *