

ವಯೋವೃದ್ಧರೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಡುಬಿದ್ರೆಯ ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ಲು ಹೇರೂರು ಎಂಬಲ್ಲಿ ನಡೆದಿದೆ. 69ವರ್ಷ ಪ್ರಾಯದ ಜಾನ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ ಜಾನ್ ಡಿಸೋಜ ಬೆಳಿಗ್ಗೆ ನಾಪತ್ತೆಯಾಗಿದ್ದರು ಹುಡುಕಾಡಿದಾಗ ಮನೆಯ ಬಾವಿಯಲ್ಲಿ ಶವ ಇರುವುದು ಪತ್ತೆಯಾಗಿದೆ. ಬಾವಿ ಬಳಿ ಪಾದರಕ್ಷೆ ಹಾಗೂ ಬ್ಯಾಟರಿ ಪತ್ತೆಯಾಗಿದ್ದು ಇದರಿಂದ ಸಂಶಯಗೊಂಡು ಮಲ್ಪೆಯ ಈಜು ತಜ್ಞ ಈಶ್ವರ್ ಬಾವಿಯಲ್ಲಿ ಮುಳುಗಿ ಶವಕ್ಕಾಗಿ ಹುಡುಕಾಟ ನಡೆಸಿದಾಗ ಶವ ಪತ್ತೆಯಾಗಿದೆ.ಶಿರ್ವ ಠಾಣೆಯಲ್ಲಿ ಘಟನೆ ನಡೆದಿದ್ದು ಶವವನ್ನು ಮಹಜರಿಗೆ ಕಳಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಇವರ ಪುತ್ರ ಕಳೆದ ಗ್ರಾ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದು, ಪೊಲೀಸರ ತನಿಖೆಯಿಂದ ಈ ಆತ್ಮಹತ್ಯೆಯ ಬಗೆಗಿನ ನಿಖರ ಕಾರಣ ತಿಳಿದು ಬರಲಿದೆ.