Header Ads
Breaking News

ವರ್ಕಾಡಿ ಉತ್ಸವ-2020 ಫೆಬ್ರವರಿ 8, 9ರಂದು ನಡೆಯಲಿರುವ ಕಾರ್ಯಕ್ರಮ

ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ನಡೆಯುವ ಕಲೆ ಸಂಸ್ಕೃತಿಯನ್ನು ಬಿಂಬಿಸುವ ವರ್ಕಾಡಿ ಉತ್ಸವ ಫೆ. 8 ಮತ್ತು 9 ರಂದು ನಡೆಯಲಿದ್ದು ಆ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ನಡೆಯಿತು.

ವರ್ಕಾಡಿ ಗ್ರಾಮಪಂಚಾಯತ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಚಾಯತ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಬಿ.ಎ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಫೆ. 8 ರಂದು ಬೆಳಗ್ಗೆ 9 ಗಂಟೆಗೆ ವರ್ಕಾಡಿ ಗ್ರಾ.ಪಂ ಕಚೇರಿ ಪರಿಸರದಲ್ಲಿ ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರಕಲಿದೆ. ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷೆ ಸುನೀತಾ ಡಿ’ಸೋಜಾ ಮಹಾತ್ಮಾ ಗಾಂಧಿ ಪ್ರತಿಮೆಯನ್ನು ಅನಾವರಣಗೊಳಿಸಿ, ಪುಷ್ಪಾರ್ಚನೆ ನಡೆಸಲಿರುವರು.

ಬೆಳಗ್ಗೆ 10 ಗಂಟೆಗೆ ವಿಚಾರಗೋಷ್ಠಿ ನಡೆಯಲಿದೆ. ಮಂಜೇಶ್ವರ ಬ್ಲಾಪಂ ಅಧ್ಯಕ್ಷೆ ಮಮತಾ ದಿವಾಕರ್ ವಿಚಾರಗೋಷ್ಠಿ ಉದ್ಘಾಟಿಸಲಿದ್ದಾರೆ. ಕಾನೂನು ಮಾಹಿತಿಯ ಬಗ್ಗೆ ಕಾಸರಗೋಡು ಜಿಲ್ಲಾ ಕಾನೂನು ಪ್ರಾಧಿಕಾರದ ಘಟಕ ಅಧಿಕಾರಿ ದಿನೇಶ ಕೊಡಂಗೆ ವಿಷಯ ಮಂಡನೆ ನಡೆಸುವರು. ಸ್ವ ಉದ್ಯೋಗದ ಬಗ್ಗೆ ನೌಷಾದ್ ಮತ್ತು ಅನಿಲ್ ಕುಮಾರ್.ಕೆ ಮಾಹಿತಿ ನೀಡುವರು. ವರ್ಕಾಡಿ ಗ್ರಾ.ಪಂ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಫಾತಿಮತ್ ಝೌರಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಅಪರಾಹ್ನ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ವರ್ಕಾಡಿ ಬೇಕರಿ ಜಂಕ್ಷನ್ ಬಳಿಯಿಂದ ಮಿನಿ ಕ್ರೀಡಾಂಗಣದ ತನಕ ಮೆರವಣಿಗೆ ನಡೆಯಲಿದೆ. ವರ್ಕಾಡಿ ಉತ್ಸವ 2020 ರ ಉದ್ಘಾಟನಾ ಕಾರ್ಯಕ್ರಮ ಸಾಯಂಕಾಲ 5 ಗಂಟೆಗೆ ನಡೆಯಲಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಎಂ.ಸಿ ಕಮರುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.

ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ ಖಾದರ್ ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಉಪಸ್ಥರಿರುವರು. ರಾತ್ರಿ 8 ಗಂಟೆಗೆ ಕಬಡ್ಡಿ ಪಂದ್ಯಾಟ ಏರ್ಪಡಲಿದೆ. ಫೆ. 9 ರಂದು ಧರ್ಮನಗರದ ಮಿನಿ ಸ್ಟೇಡಿಯಂ ಸಭಾಂಗಣದಲ್ಲಿ ಕೃಷಿ ಮತ್ತು ಜಲಸಂರಕ್ಷಣೆ, ಆರೋಗ್ಯ ಮತ್ತು ಶುಚಿತ್ವ ವಿಚಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಕಾಸರಗೋಡು ಜಿ.ಪಂ ಸದಸ್ಯೆ ಪುಪ್ಪಾ ಅಮೆಕ್ಕಳ ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭ ಎಂ.ಎ ಸ್ನಾತಕೋತ್ತರ ಪದವಿ ವಿಜೇತೆ ಮೀನಾಕ್ಷಿ ಬೊಡ್ಡೋಡಿ ಸಹಿತ ಹಲವು ಕ್ಷೇತ್ರಗಳಲ್ಲಿ ಉನ್ನತ ಸಾಧನೆಗೈದ ಮಂದಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ನಿವೃತ್ತ ಸೈನಿಕರಿಗೆ ಗೌರವಾರ್ಪಣೆ ಕಾರ್ಯಕ್ರಮವೂ ಏರ್ಪಡಲಿದೆ. ರಾತ್ರಿ 7 ರಿಂದ ಹಾಸ್ಯ ಕಾರ್ಯಕ್ರಮ ‘ಕುಸಲ್ದ ಕುರ್ಲರಿ’ ನಡೆಯಲಿದೆ. ಫೆ. 9ರಂದು 2 ಗಂಟೆಗೆ ಕುಟುಂಬಶ್ರೀ ಕಾರ್ಯಕರ್ತೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಅಪರಾಹ್ನ 3 ಗಂಟೆಗೆ ಅಕ್ಕಿ ಮುಡಿ ಕಟ್ಟುವ ಸ್ಪರ್ಧೆ, ತೆಂಗಿನ ಮಡಲು ಹೆಣೆಯುವುದು, ಚಾಪೆ ನೇಯುವ ಸ್ಪರ್ಧೆ, ಬುಟ್ಟಿ ಹೆಣೆಯುವ ಸ್ಪರ್ಧೆ ಏರ್ಪಡಲಿದೆ. ಸಾಯಂಕಾಲ ಐದು ಗಂಟೆಗೆ ನಡೆಯುವ ಸಮಾರೋಪ ಸಮಾರಂಭವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಈ ಸಂದರ್ಭ ಎಂ.ಸಿಎಫ್ ಕಟ್ಟಡ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಪ್ರದಾನ ನಡೆಯಲಿದೆ. ಗ್ರಾ.ಪಂ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ, ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್, ಜಿಲ್ಲಾಧಿಕಾರಿ ಸಜಿತ್ ಬಾಬು, ಮಾಜಿ ಶಾಸಕ ಸಿ.ಎಚ್ ಕುಞಂಬು, ಚಿತ್ರ ನಟ ಪೃಥ್ವಿ ಅಂಬಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷೆ ಸುನಿತಾ ಡಿ ಸೋಜ, ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷೆ ರಹ್ಮತ್ ರಜಾಕ್, ಕ್ಷೇಮ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ತುಳಸಿ ಕುಮಾರಿ, ವಿಧ್ಯಾಭ್ಯಾಸ ಹಾಗೂ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಜಿಸಿಂತ ಡಿಸೋಜ, ಸದಸ್ಯರುಗಳಾದ ಅಬ್ದುಲ್ ರಹ್ಮಾನ್, ಪೂರ್ಣಿಮಾ ಎಸ್ ಬೆರಿಂಜೆ, ಮೈಮೂನ, ಗೋಪಾಲ ಕೃಷ್ಣ ಪಜ್ವ, ವಸಂತ, ಸದಾಶಿವ ನಾಯ್ಕ್, ಆನಂದ ತಚ್ಚಿರೆ, ಸೀತಾ ಡಿ, ಹಾಗೂ ಕಾರ್ಯದರ್ಶಿ ರಾಜೇಶ್ವರಿ ಬಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *