Header Ads
Header Ads
Header Ads
Breaking News

ವರ್ಕಾಡಿ ಫೆಸ್ಟ್ -2019 ಕಚೇರಿ ಉದ್ಘಾಟನೆ ಹಾಗೂ ಲೋಗೋ ಪ್ರಕಾಶನ

ಮಂಜೇಶ್ವರ : ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಡಿಸೆಂಬರ್ ತಿಂಗಳ 27 ಹಾಗೂ 28 ರಂದು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ವರ್ಕಾಡಿ ಉತ್ಸವ 2019 ರ ಕಚೇರಿ ಉದ್ಘಾಟನೆ ಹಾಗೂ ಲೋಗೋ ಪ್ರಕಾಶನ ನಡೆಯಿತು.

ವರ್ಕಾಡಿ ಗ್ರಾ. ಪಂ. ಅಂಗಣದಲ್ಲಿ ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ಬಿ ಎ. ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ಉದ್ಘಾಟಿಸಿದರು. ಬ್ಲೋಕ್ ಪಂ. ಉಪಾಧ್ಯಕ್ಷೆ ಮಮತಾ ದಿವಾಕರ್ ಮುಖ್ಯ ಅತಿಥಿಯಾಗಿದ್ದರು. ಈ ಸಂದರ್ಭ ಪಂ. ಸದಸ್ಯರುಗಳು ಹಾಗೂ ಊರವರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

ಕೇರಳದ ಅತೀ ಉತ್ತರ ತುದಿಯಲ್ಲಿರುವ ವರ್ಕಾಡಿ ಗ್ರಾ. ಪಂ. ಗೊಳಪಡುವ ಗ್ರಾಮಗಳು ವೈವಿಧ್ಯಮಯ ಕಲೆ ಸಂಸ್ಕೃತಿ ಭಾಷೆಗಳ ತವರೂರು ಕೂಡಾ ಆಗಿದೆ. ಪರಿಶಿಷ್ಟ ಜಾತಿ/ ವರ್ಗಗಳ ಜನರೂ ಸೇರಿದಂತೆ ವಿವಿಧ ಧರ್ಮದ ಜನರನ್ನು ಒಟ್ಟುಗೂಡಿಸಿ ಕಾರ್ಯಕ್ರಮವನ್ನು ಆಯೋಜಿಸಲು ತೀರ್ಮಾನಿಸಲಾಗಿದೆ.
ಡಿ. 27 ರಂದು ಕೇರಳದ ಸನ್ಮಾನ್ಯ ಕಂದಾಯ ಸಚಿವರಾದ ಇ ಚಂದ್ರ ಶೇಖರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದ್, ಮಂಜೇಶ್ವರ ಶಾಸಕ ಎಂ. ಸಿ ಖಮರುದ್ದೀನ್ ಅಧ್ಯಕ್ಷತೆ ವಹಿಸಲಿದ್ದಾರೆ. ಡಿ. 28 ರಂದು ಕೇಂದ್ರದ ಅನಿವಾಸಿ ಖಾತೆ ಸಚಿವ ಶ್ರೀ ವ್. ಮುರಳೀಧರ ಸಮಾರೋಪ ಸಮರಂಭವನ್ನು ಉದ್ಘಾಟಿಸಲಿರುವರು. ಕಾಸರಗೋಡು ಸಂಸದ ಶ್ರೀ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಲಿದ್ದಾರೆ.

Related posts

Leave a Reply

Your email address will not be published. Required fields are marked *