Header Ads
Breaking News

ವರ್ಕಾಡಿ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ವೋಲ್ಟೇಜ್ ಕ್ಷಾಮ : ಗ್ರಾಮಸ್ಥರಿಂದ ಭಾರೀ ವಿರೋಧ

ಮಂಜೇಶ್ವರ: ವರ್ಕಾಡಿ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ವೋಲ್ಟೇಜ್ ಕ್ಷಾಮ ಮುಂದುವರಿಯುತ್ತಿದ್ದು, ಜನರು ಸಂಕಷ್ಟವನ್ನು ಎದುರಿಸುವಂತಾಗಿದೆ. ವರ್ಕಾಡಿ ವಿದ್ಯುತ್ ಸೆಕ್ಷನ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಉಂಟಾಗಿರುವ ವಿದ್ಯುತ್ ವೋಲ್ಟೇಜ್ ಕ್ಷಾಮದಿಂದ ಗ್ರಾಮಸ್ಥರು ವಿವಿಧ ರೀತಿಯ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಬಗ್ಗೆ ಒಂದು ಸ್ಟೋರಿ ಇಲ್ಲಿದೆ.

ಗ್ರಾಮಸ್ಥರು ಈ ಬಗ್ಗೆ ಹಲವಾರು ಸಲ ಸಂಬಂಧಪಟ್ಟವರಿಗೆ ದೂರುಗಳನ್ನು ನೀಡಿದರು ಈ ತನಕ ಯಾವುದೇ ಫಲ ಕಾಣಲಿಲ್ಲವೆಂಬುದು ಗ್ರಾಮಸ್ಥರ ಅಳಲು. ವೋಲ್ಟೇಜ್ ಸಮಸ್ಯೆಯನ್ನು ಎದುರಿಸುತ್ತಿರುವ ಪ್ರದೇಶಗಳಲ್ಲಿ ಹೊಸತಾದ ಟ್ರಾನ್ಸ್ ಫೋರ್ಮರ್ ಸ್ಥಾಪಿಸುವಂತೆ ಊರವರು ಹಾಗು ಜನಪ್ರತಿನಿಧಿಗಳು ಹಲವಾರು ಸಲ ವಿದ್ಯುತ್ ಸೆಕ್ಷನ್ ಅಧಿಕಾರಿಗಳನ್ನು ಒತ್ತಾಯಿಸಿದರು ಇದ್ಕಕೊಂಡು ಪರಿಹಾರವನ್ನು ಕಾಣಲು ಅಧಿಕಾರಿಗಳು ಮೀನ ಮೇಷ ಎಣಿಸುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.

ವಿದ್ಯುತ್ ಕ್ಷಾಮ ತಲೆದೋರಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಕತ್ತಲೆಯಲ್ಲಿ ಇರಬೇಕಾದ ಪರಿಸ್ಥಿತಿ ಎದುರಾಗಿದೆ. ವರ್ಕಾಡಿ ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಮಜೀದ್ ರವರ ಅಧ್ಯಕ್ಷತೆಯಲ್ಲಿ ನಡೆದ ಬೋರ್ಡ್ ಸಭೆಯಲ್ಲಿ ವಿದ್ಯುತ್ ವೋಲ್ಟೇಜ್ ಕ್ಷಾಮಕ್ಕೆ ಕೂಡಲೇ ಪರಿಹಾರ ಕಾಣುವಂತೆ ಒತ್ತಾಯಿಸಲಾಗಿದೆ. ಸಭೆಯಲ್ಲಿ ಪಂ. ಉಪಾಧ್ಯಕ್ಷೆ ಸುನಿತಾ ಡಿ ಸೋಜ, ಪಾವೂರು, ರಹ್ಮತ್ ರಜಾಕ್, ತುಳಸಿ ಕುಮಾರಿ ಸೇರಿದಂತೆ ಹಲವಾರು ಪಾಲ್ಗೊಂಡರು .

ಮುಂದಿನ ದಿನಗಳಲ್ಲಿ ವೋಲ್ಟೇಜ್ ಸಮಸ್ಯೆಗೊಂದು ಪರಿಹಾರವನ್ನು ಕಾಣದೆ ಇದ್ದರೆ ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ. ಒಟ್ಟಿನಲ್ಲಿ ಇನ್ನಾದರೂ ಸಮಸ್ಯೆಗೆ ಪರಿಹಾರವನ್ನು ಒದಗಿಸ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

Related posts

Leave a Reply

Your email address will not be published. Required fields are marked *