Header Ads
Header Ads
Breaking News

ವರ್ಷಧಾರೆಯಲ್ಲಿ ಮುಗಿಲನ್ನು ಚುಂಬಿಸುವಂತೆ ಮೈದುಂಬಿ ಹರಿಯುತ್ತಿದೆ ಮಲ್ಲಳ್ಳಿ ಜಲಪಾತ..!

ಮಡಿಕೇರಿ ಅಂದಾಕ್ಷಣ ನೆನಪಾಗೋದು ಮಳೆಗಾಲದಲ್ಲಿ ಭೋರ್ಗರೆವ ಜಲಧಾರೆಗಳು. ನೋಡ್ತಾ ಇದ್ರೆ ಜಲಧಾರೆಗಳು ಮೈತುಂಬಿಕೊಂಡ ಕನ್ಯೆಯಂತೆ ಕಂಗೊಳಿಸುವಂತೆ ಗೋಚರವಾಗುತ್ತದೆ. ಅಂತಹ ಜಲಾಧಾರೆಗಳಲ್ಲಿ ಸೋಮಾವಾರ ಪೇಟೆಯ ಮಲ್ಲಳ್ಳಿ ಜಲಧಾರೆ ಕೂಡಾ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.

ಒಂದು ಕಡೆ ಮುಗಿಲನ್ನು ಚುಂಬಿಸುವಂತೆ ನಿಂತ ಬೆಟ್ಟ ಶ್ರೀಣಿಗಳು, ಇನ್ನೊಂದು ಕಡೆ ಕಣ್ಣು ಹಾಯಿಸಿದುದ್ದಕ್ಕೂ ಹಸಿರು ಹಸಿರಾದ ನಿಸರ್ಗ, ಮತ್ತೊಂದು ಕಡೆ ಕಂದಕದಲ್ಲಿ ಒತ್ತೊತ್ತಾಗಿ ಬೆಳೆದು ನೀತ ವೃಕ್ಷ ರಾಶಿಗಳು.. ನೋಡ್ತಾ ಇದ್ರೆ ಒಂದು ದಟ್ಟ ಅಡವಿಯ ನಡುವಿನ ಸುಂದರ ಪರಿಸರದೊಳಗೆ ದೊಡ್ಡ ಬಂಡೆಯ ಮೇಲೆ ಬೆಳ್ಳಿ ಬಳುಕಿದಂತೆ ಗೋಚರವಾಗುವ ಭಾವನೆ. ಇಲ್ಲಿಗೆ ತೆರಳಿದವರ ಜಲಧಾರೆಯ ರುದ್ರನರ್ತನ ರೋಮಾಂಚನಗೊಳಿಸುತ್ತದೆ.

ಹೌದು.. ಸೋಮವಾರ ಪೇಟೆಯ ಶಾಂತಳ್ಳಿ ಸಮೀಪದ ಮಲ್ಲಾಳಿ ಜಲಧಾರೆಯ ಜಲನರ್ತನ ಕಣ್ಣಿಗೆ ಒಂದು ಹಬ್ಬವೇ ಸರಿ. ಮಡಿಕೇರಿಯಲ್ಲಿ ಹಲವಾರು ಜಲಧಾರೆಗಳನ್ನು ನೋಡಬಹುದು. ಆದ್ರೆ ಈ ಮಲ್ಲಾಳಿ ಫಾಲ್ಸ್ ಇದೆಲ್ಲಕಿಕೀಮತ ವಿಭಿನ್ನವಾಗಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಈ ಜಲಧಾರೆ ಕೊಡಗಿನಲ್ಲಿರುವ ಬೆಟ್ಟಗಳಲ್ಲಿ ಒಂದಾದ ಪುಷ್ಪಗಿರಿ ಬೆಟ್ಟಶ್ರೇಣಿಯ ಕುಮಾರ ಪರ್ವತದ ನಡುವೆ ಕುಮಾರಧಾ ನದಿಯಿಂದ ಸೃಷ್ಟಿಯಾಗಿದೆ.

ಹಾಗೆನೋಡಿದರೆ ಮಲ್ಲಳ್ಳಿ ಜಲಧಾರೆ ಸನಿಹಕ್ಕೆ ಹೋಗಿ ಬರುವುದು ಅಷ್ಟು ಸುಲಭವಲ್ಲ. ಪೇಟೆ, ಪಟ್ಟಣದಿಂದ ದೂರವಾಗಿ, ಬಸ್, ವಾಹನಗಳ ಸಂಚಾರದಿಂದ ವಂಚಿತವಾಗಿರುವ ಈ ತಾಣಕ್ಕೆ ಭೇಟಿ ನೀಡಬೇಕೆಂದರೆ, ಹರಸಾಹಸವನ್ನೇ ಪಡಬೇಕಾಗುತ್ತದೆ. ರಕ್ತ ಹೀರಲು ಬರುವ ಜಿಗಣೆಗಳಿಂದ ತಪ್ಪಿಸಿಕೊಂಡು ಕಲ್ಲು-ಮುಳ್ಳು, ಏರು ತಗ್ಗುಗಳ ಹಾದಿಯನ್ನು ಕ್ರಮಿಸಿ ಶ್ರಮಪಡಬೇಕು. ಇದಕ್ಕೆಲ್ಲಾ ತಯಾರಿದ್ದರೆ ಮಾತ್ರ ನಾವು ಸನಿಹಕ್ಕೆ ತೆರಳಿ ಜಲಧಾರೆಯ ಸೊಬಗನ್ನು ಸವಿಯಲು ಸಾಧ್ಯ. ಬೆಟ್ಟಗಳ ನಡುವಿನ ಹೆಬ್ಬಂಡೆಗಳ ಮೇಲಿನಿಂದ ಬೃಹತ್ ಕಂದಕಕ್ಕೆ ಸುಮಾರು ಎಂಬತ್ತು ಅಡಿ ಅಗಲವಾಗಿ ನೂರೈವತ್ತು ಅಡಿಯಷ್ಟು ಎತ್ತರದಿಂದ ಧುಮುಕುವ ಜಲರಾಶಿ ಬಳಿಕ ಚಿಕ್ಕಾತಿ ಚಿಕ್ಕ ಜಲಧಾರೆಗಳಾಗಿ ತಳಸೇರುವುದನ್ನು ನೋಡುವುದೇ ಕಣ್ಣಿಗೆ ಹಬ್ಬವಾಗುತ್ತದೆ. ಒಂದು ಹೆಬ್ಬಂಡೆಯಿಂದ ಇನ್ನೊಂದು ಹೆಬ್ಬಂಡೆಗೆ ಚಿಮ್ಮುವಾಗ ಕಾಣಸಿಗುವ ಸುಂದರ ದೃಶ್ಯ ಹುಚ್ಚೆದ್ದು ಕುಣಿಯುವಂತೆ ಮಾಡುತ್ತದೆ. ಒಂದು ಕ್ಷಣ ಭೂತಾಯಿಯ ಒಡಲ ಬೆಳ್ಳಿಯೆಲ್ಲಾ ಕರಗಿ ಬಂಡೆಯ ಮೇಲೆ ಹರಿಯುತ್ತಿದೆಯೇನೋ ಎಂಬಂತೆ ಭಾಸವಾಗುತ್ತದೆ.ಒಟ್ಟಿನಲ್ಲಿ ಮಲ್ಲಳ್ಳಿ ಜಲಧಾರೆ ಪ್ರೇಕ್ಷಕರ ನೆಚ್ಚಿನ ತಾಣವಾಗಿದ್ದು ತನ್ನ ಜಲನರ್ತನದಿಂದ ಗಮನ ಸೆಳೆದು ತನ್ನ ವಯ್ಯಾರವನ್ನು ಎಲ್ಲಡೆ ಪಸರಿಸಿದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

Related posts

Leave a Reply

Your email address will not be published. Required fields are marked *