Header Ads
Header Ads
Header Ads
Header Ads
Header Ads
Header Ads
Header Ads
Header Ads
Breaking News

ವಾಟ್ಸ್‌ಆಪ್ ಗ್ರೂಪಿನ ಮೂಲಕ ಸಮಾಜಕ್ಕೆ ಅತ್ಯುತ್ತಮ ಸೇವೆ: ಯುವಕರು ನೀಡುತ್ತಿರುವ ಕಾರ್ಯಕ್ಕೆ ಸಚಿವ ಖಾದರ್ ಶ್ಲಾಘನೆ

ಉಳ್ಳಾಲ: ವಾಟ್ಸ್ಯಾಪ್ ಗ್ರೂಪಿನ ಮೂಲಕ ಸಂಘಟಿಸಿ ಸಮಾಜಕ್ಕೆ ಅತ್ಯುತ್ತಮ ಸೇವೆಯನ್ನು ನೀಡುತ್ತಿರುವ ಯುವಕರ ಕಾರ್ಯ ಶ್ಲಾಘನೀಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಅವರು ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ ಭಾನುವಾರ ಜರಗಿದ ಮೇಲಂಗಡಿ ಕ್ರಿಕೆಟ್ ಕ್ಲಬ್, ಆಝಾದ್ ಫ್ರೆಂಡ್ಸ್ ಸರ್ಕಲ್ ಹಾಗೂ ಉಳ್ಳಾಲ ವಲಯದ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಇದರ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಇದರ ಸಹಯೋಗದೊಂದಿಗೆ ದ್ವಿತೀಯ ಸಂಭ್ರಮ ಮತ್ತು ಸಾರ್ವಜನಿಕ ಬೃಹತ್ ರಕ್ತದಾನ ಶಿಬಿರ, ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು.
ಆಧುನಿಕ ತಂತ್ರಜ್ಞಾನವನ್ನು ಬಲಪಡಿಸಿಕೊಂಡು ಯುವಕರ ಸಂಘಟನೆಯ ಮನೋಭಾವ, ಉದ್ದೇಶ ಸಮಾಜಕ್ಕೆ ಪೂರಕವಾಗಿದೆ. ತಾಳ್ಮೆ, ಪ್ರೀತಿ ,ವಿಶ್ವಾಸ , ಸಹೋದರತೆಯಿಂದ ಯುವಸಮುದಾಯ ಬಾಳಬೇಕಿದೆ ಎಂದರು.
ಈ ಸಂದರ್ಭ ಉಳ್ಳಾಲದ ಹಿಂದಿನ ಖಾಝಿ ತಾಜುಲ್ ಉಲೆಮಾ ತಂಙಳ್ ಅವರ ಹೆಸರಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಚಿವ ಖಾದರ್ ಉದ್ಘಾಟಿಸಿದರು. ಸ್ಥಳೀಯ ಸುಧಾಕರ್ ಪೂಂಜಾ ಅವರು ಘಟಕವನ್ನು ಕೊಡುಗೆಯಾಗಿ ನೀಡಿದ್ದಾರೆ.

ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಕರಾವಳಿ ಅಧ್ಯಕ್ಷ ಯು.ಬಿ.ಸಲೀಂ, ಉಳ್ಳಾಲ ನಗರಸಭೆ ಸದಸ್ಯ ಮುಸ್ತಾಫ ಅಬ್ದುಲ್ಲಾ, ಎಸ್ ವೈಎಸ್ ದ.ಕ ಜಿಲ್ಲಾ ಕೋಶಾಧಿಕಾರಿ ಹನೀಫ್ ಬಿ.ಜಿ, ಮೇಲಂಗಡಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಯಹ್ಯಾ ಬಿಲಾಲ್, ಸಚಿವರ ಆಫ್ತ ಕಾರ್‍ಯದರ್ಶಿ ಮಹಮ್ಮದ್ ಲಿಬ್ಝತ್, ಉಪಾಧ್ಯಕ್ಷ ಹನೀಫ್, ಸಲಹೆಗಾರ ಅಶ್ರಫ್, ಆಝಾದ್ ಪ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಮುಝಾಫರ್, ಫಿಶ್ ಮಿಲ್ ಮತ್ತು ಆಯಿಲ್ ಅಸೋಸಿಯೇಷನ್ ಅಧ್ಯಕ್ಷ ಹೆಚ್.ಕೆ.ಖಾಧರ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಎಡ್ಮಿನ್ ಸಾದಿಕ್ ಪಾವೂರು ಉಪಸ್ಥಿತರಿದ್ದರು.
ವರದಿ: ಆರೀಪ್ ಉಳ್ಳಾಲ

Related posts

Leave a Reply