Header Ads
Header Ads
Header Ads
Header Ads
Header Ads
Header Ads
Breaking News

ವಾಮಂಜೂರಿನಲ್ಲಿ ಕಂಪೌಂಡ್ ವಾಲ್ ಕುಸಿದು ಮನೆಯ ಗೋಡೆಗೆ ಹಾನಿ : ಆತಂಕದಲ್ಲಿ ನಿವಾಸಿಗಳು

ಮಂಗಳೂರಿನ ಹೊರವಲಯವಾದ ವಾಮಂಜೂರು ಸಂತೋಷ್‌ನಗರದ ನಿವಾಸಿ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಹೆಗ್ಡೆಯವರ ಮನೆಯ ಮೇಲಿನ ಮನೆಯವರ ಕಂಪೌಂಡ್ ವಾಲ್ ಕುಸಿದು ಮನೆಯ ಗೋಡೆಗೆ ಸ್ವಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಇನ್ನೂ ಕಂಪೌಂಡ್ ವಾಲ್ ಪೂರ್ಣ ಕುಸಿಯುವ ಹಂತದಲ್ಲಿದೆ ಒಂದು ವೇಳೆ ಕಂಪೌಂಡ್ ವಾಲ್ ಪೂರ್ಣ ಕುಸಿದರೆ ಮನೆಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗುವ ಸಾಧ್ಯತೆಯಿದೆ ಎಂದು ಆತಂಕದಲ್ಲಿದ್ದಾರೆ ಮನೆಯವರು.

ಈ ಸಂದರ್ಭ ಎಂ.ಜಿ.ಹೆಗ್ಡೆ ಮಾತನಾಡಿ ಈ ಪ್ರದೇಶ ಪೂರ್ಣ ಕೆಂಪುಕಲ್ಲಿನಿಂದ ಕೂಡಿದೆ. ಮನೆ ಕೂಡ ಕೆಂಪು ಕಲ್ಲನ್ನು ಕಟ್ ಮಾಡಿ ಕಟ್ಟಲಾಗಿದೆ ಮತ್ತು ಮನೆಯ ಹಿಂದಿರುವ ಬರೆ ಕೂಡ ಕಟ್ಟಿಯಾಗಿದೆ ಆದರೆ ನಮ್ಮ ಮನೆಯ ಮೇಲಿನ ಮನೆಯವರ ಕಂಪೌಂಡ್ ವಾಲ್ ಕುಸಿದಿರುವುದು ಆತಂಕ ಸೃಷ್ಠಿಯಾಗಿದೆ. ಮಳೆ ನಿರಂತವಾಗಿ ಸುರಿಯುತ್ತಿದ್ದು ಇನ್ನೂ ಹೆಚ್ಚು ಪ್ರಮಾಣದಲ್ಲಿ ಹಾನಿಯಾಗಬಹುದು ಎಂದು ಆತಂಕವಾಗುತ್ತಿದೆ ಎಂದು ಹೇಳಿದರು.

Related posts

Leave a Reply

Your email address will not be published. Required fields are marked *