

ಮಂಜೇಶ್ವರ: ರಿಧಂ ಕಲ್ಚರಲ್ ವಿಂಗ್ಸ್ ಮತ್ತು ಇಂಚರಾ ಮೆಲೋಡಿಸ್ ವತಿಯಿಂದ ನಡೆಸಲಾದ ಮ್ಯೂಸಿಕಲ್ ರಿಯಾಲಿಟೀ ಶೋ ವಾಯ್ಸ್ ಆಫ್ ಗಡಿನಾಡು ಸೂಪರ್ ಟ್ರೂಪ್-2020 ಇಂಚರಾ ಮೆಲೋಡಿಸ್ ಸ್ಟುಡಿಯೋದಲ್ಲಿ ಜರಗಿತು.
ಸಂಸ್ಕೃತಿ ಆಧರಿಸಿ ನಡೆಸಿದ ಕಾರ್ಯಕ್ರಮದಲ್ಲಿ ರಿಯಾಲಿಟಿ ಶೋ ನೋಡುಗರಿಗೆ ರಸದೌತಣವನ್ನು ನೀಡಿ ಮನರಂಜಿಸಿತು. ಕೇಶವ ಕಲರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಬಾಲಕೃಷ್ಣ ನೆಟ್ಟಾರ್ ಉದ್ಘಾಟಿಸಿದರು. ಶ್ರೀ ಬಾಬು ಕಾಟುಕುಕ್ಕೆ, ಗಾಯಕ ಶ್ರೀ ದಿನೇಶ್ ಮಿತ್ತನಡ್ಕ, ಇಂಚರಾ ಸ್ಥಾಪಕ ಶ್ರೀ ಕೇಶವ ಕನಿಲ, ರಿದಂ ನ ಸಿದ್ದೀಕ್ ಮಂಜೇಶ್ವರ ಮೊದಲಾದವರು ಮುಖ್ಯ ಅತಿಥಿಗಳಾಗಿದ್ದರು. ಸ್ಪರ್ಧೆಯಲ್ಲಿ ಪ್ರವೀಣ್ ನಾಯಕತ್ವದ ಸ್ವರಲಯ ತಂಡ ಪ್ರಥಮ, ಸಿದ್ದೀಕ್ ಮಂಜೇಶ್ವರ ನಾಯಕತ್ವದ ನಾದತರಂಗಿಣಿ ದ್ವಿತೀಯ, ಉತ್ತಮ ಪ್ರತಿಭಾ ತಂಡವಾಗಿ ಶ್ರೀ ಕೇಶವ ಕನಿಲ ನಾಯಕತ್ವದ ಸಪ್ತಸ್ವರ ಮತ್ತು ಉತ್ತಮ ಪ್ರದರ್ಶನ ತಂಡವಾಗಿ ಸುಚಿನ್ ಮಂಗಲ್ಪಾಡಿ ನಾಯಕತ್ವದ ಸ್ವರ ಸಂಗೀತ್ ಪ್ರಶಸ್ತಿಯನ್ನು ತನ್ನ ದಾಗಿಸಿಕೊಂಡಿತು. ಕಾರ್ಯಕ್ರಮ ವೀಕ್ಷಿಸಲು ಜಿಲ್ಲೆಯ ವಿವಿಧ ಭಾಗಗಳಿಂದ ಹಲವಾರು ಮಂದಿ ಆಗಮಿಸಿದ್ದರು.