Header Ads
Breaking News

ವಿಕಲಚೇತನ ಮಕ್ಕಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿದ ರಮಾನಾಥ್ ರೈ

ವಿಕಲಚೇತನ ಮಕ್ಕಳಿಗೆ ಅನುಕಂಪ, ಸಹಾನುಭೂತಿ ತೋರಿಸಿದರೆ ಸಾಲದು. ನಿಜಾರ್ಥದಲ್ಲಿ ಅವರ ಕೆಲಸಗಳನ್ನು ಮಾಡತಕ್ಕಂತದ್ದು ಅವರಿಗೆ ಕೊಡುವ ಅನುಕಂಪ. ಆ ಕೆಲಸವನ್ನು ಅಣ್ಣಪ್ಪ ದಂಪತಿ ಮಾಡುತ್ತಿರುವುದು, ಅವರ ಕಷ್ಟ ಕಾರ್ಪಣ್ಯದಲ್ಲಿ ಭಾಗಿಯಾಗತಕ್ಕದ್ದು ದೊಡ್ಡ ಸಾಧನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.ಅವರು ಸೋಮವಾರ ಬನ್ನೂರಿನ ಪ್ರಜ್ಞಾ ಮಾನಸಿಕ ಭಿನ್ನ ಸಾಮಥ್ರ್ಯ ತರಬೇತಿ ಮತ್ತು ವಸತಿ ಕೇಂದ್ರಕ್ಕೆ ಭೇಟಿ ನೀಡಿ ವಿಕಲಚೇತನ ಮಕ್ಕಳೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿ ಬಳಿಕ ಮಾತನಾಡಿದರು.ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಲ್ಯಾನ್ಸಿ ಮಸ್ಕರೇನಸ್, ಮುರಳೀಧರ ರೈ ಮಠಂತಬೆಟ್ಟು, ಅನ್ವರ್ ಖಾಸಿಂ, ರವಿಪ್ರಸಾದ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು. ಅಣ್ಣಪ್ಪ ದಂಪತಿ ಸಚಿವರನ್ನು ಸ್ವಾಗತಿಸಿದರು. ಬಳಿಕ ಕೇಂದ್ರದ ವಿಕಲಚೇತನ ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ತನ್ನ ಹುಟ್ಟು ಹಬ್ಬವನ್ನು ಆಚರಿಸಿದರು. ಬಳಿಕ ಎಲ್ಲರ ಜತೆ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ವಿಕಲಚೇತನರು ಹಾಡುಗಳನ್ನು ಹಾಡುವ ಮೂಲಕ ಸಂಭ್ರಮಿಸಿದ್ರು.

Related posts

Leave a Reply

Your email address will not be published. Required fields are marked *