Header Ads
Header Ads
Breaking News

ವಿಜಯ ಬ್ಯಾಂಕ್ ವಿಲೀನ ಪ್ರಕ್ರಿಯೆ:ನಗರದ ಕಾಂಗ್ರೆಸ್ ಭವನದ ಮುಂದೆ ಪ್ರತಿಭಟನೆ

ಕೇಂದ್ರ ಸರ್ಕಾರದ ವಿರುದ್ದ ನೋಟು ಅಮಾನ್ಯೀಕರಣವಾಗಿ 2 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಮತ್ತು ವಿಜಯ ಬ್ಯಾಂಕನ್ನು ಇತರ ಬ್ಯಾಂಕ್‌ನೊಂದಿಗೆ ವಿಲೀನಿಕರಣಗೊಳಿವುದರ ವಿರುದ್ದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಕಾಂಗ್ರೆಸ್ ಭವನದ ಮುಂದೆ ಬೃಹತ್ ಪ್ರತಿಭಟನಾ ಸಭೆ ನಡೆಯಿತು.ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಹರೀಶ್ ಕುಮಾರ್ ಮಾತನಾಡಿ ವಿಜಯ ಬ್ಯಾಂಕ್‌ನ್ನು ವಿಲೀನಗೋಳಿಸಬಾರದು ಇದು ನಮ್ಮ ಜಿಲ್ಲೆಯ ಬ್ಯಾಂಕ್ ಮತ್ತು ನೋಟು ಅಪನಗದಿಕರಣದಿಂದ ದೇಶಕ್ಕೆ ಲಾಭ ಅಗುತ್ತದೆ, ಗಡಿ ಸಮಸ್ಯೆಗೆ ಪರಿಹಾರ ದೊರೆಯುತ್ತದೆ, ಕಪ್ಪು ಹಣ ನಿರ್ಮೂಲನೆಯಾಗುತ್ತದೆ ಎಂದಿದ್ದರು ಅದರೆ ಶೇಕಡ 99.7 ರಷ್ಟು ಹಳೆ ನೋಟು ವಾಪಸ್ ಬಂದಿದೆ ಹಾಗಾದರೆ ಕಪ್ಪು ಹಣ ಎಲ್ಲಿದೆ ಎಂದರು.ಬಳಿಕ ಮಾತನಾಡಿದ ಮಾಜಿ ಉಸ್ತುವಾರಿ ಸಚಿವ ರಮಾನಾಥ್ ರೈ ಹಿಂದಿನ ಮೋದಿ ಸರ್ಕಾರದ ಹಳೆಯ ಕ್ಯಾಸೆಟ್‌ಗಳನ್ನು ನೋಡಬೇಕಾಗಿದೆ ನೋಟು ಅಪನಗದಿಕರಣದಿಂದ ಜನ ಸಾಮಾನ್ಯರಿಗೆ ಅನೇಕ ಸಮಸ್ಯೆಗಳಾಗಿದೆ ಎಂದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಶಾಸಕ ಜೆ.ಆರ್.ಲೋಬೊ, ಮಾಜಿ ಮೇಯರ್ ಕವಿತಾ ಸನಿಲ್, ಜಿಲ್ಲಾಪಂಚಾಯತ್ ಸದಸ್ಯೆ ಮಮತಾ ಗಟ್ಟಿ ಮೊದಲಾದವರು ಭಾಗವಹಿಸಿದ್ದರು.

Related posts

Leave a Reply