Header Ads
Breaking News

ವಿಟ್ಲದ ಅನಂತಾಡಿ ಕರಿಂಕ ಭಜನಾ ಮಂದಿರದಲ್ಲಿ ನಡೆದ ಗ್ರಾಮ ವ್ಯಾಪ್ತಿಯ ಶಾಸಕರ ಗ್ರಾಮ ಸ್ಪಂದನೆ ಕಾರ್ಯಕ್ರಮ

ವಿಟ್ಲದ ಅನಂತಾಡಿ ಕರಿಂಕ ಭಜನಾ ಮಂದಿರದಲ್ಲಿ ಗ್ರಾಮ ವ್ಯಾಪ್ತಿಯ ಶಾಸಕರ ಗ್ರಾಮ ಸ್ಪಂದನೆ ಕಾರ್ಯಕ್ರಮ ಅನಂತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗ್ರಾಮದ ಸಮಸ್ಯೆಗಳಿಗೆ ಸ್ಥಳೀಯ ಮಟ್ಟದ ಅಧಿಕಾರಿಗಳಿಂದ ಬಗೆಹರಿಸುವ ಪ್ರಯತ್ನ ಇದಾಗಿದೆ. ಜನರ ಧ್ವನಿಯನ್ನು ವಿಧಾನ ಸಭೆಯವರೆಗೆ ತೆಗೆದುಕೊಂಡು ಹೋಗಿ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಅನಂತಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಂದ್ರ ಸರ್ಕಾರ ಉಚಿತ ಗ್ಯಾಸ್ ಸಂಪರ್ಕ ಫಲಾನುಭವಿಗಳಿಗೆ ಗ್ಯಾಸ್ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭ ಗೋಳ್ತಮಜಲು ಜಿ.ಪಂ.ಸದಸ್ಯೆ ಕಮಲಾಕ್ಷಿ ಪೂಜಾರಿ, ತಾ.ಪಂ.ಸದಸ್ಯೆ ಗೀತಾ ಚಂದ್ರಶೇಖರ್, ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ, ಜಿ.ಪಂ.ಎಂಜಿನಿಯರ್ ನಾಗೇಶ್ ಬಿಲ್ಲವ, ಉಪತಹಶೀಲ್ದಾರ್ ರವಿಶಂಕರ್, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *