Header Ads
Header Ads
Header Ads
Breaking News

ವಿಟ್ಲದ ಉಕ್ಕುಡದಲ್ಲಿ ನಡೆದ ಮನೆ ದರೋಡೆ ಪ್ರಕರಣ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಓರ್ವ ಆರೋಪಿ ಬಂಧನ, ನಗ, ನಗದು ವಶ

ವಿಟ್ಲ ಕಸಬಾ ಗ್ರಾಮದ ಉಕ್ಕುಡದಲ್ಲಿ ಡಿಸೆಂಬರ್ 7 ರಂದು ನಡೆದ ಮನೆ ದರೋಡೆ ಪ್ರಕರಣವನ್ನು ಬೇಧಿಸುವಲ್ಲಿ ವಿಟ್ಲ ಪೊಲೀಸರ ತಂಡ ಯಶಸ್ವಿಯಾಗಿದ್ದು, 25 ಪವನ್ ಚಿನ್ನಾಭರಣ, 30 ಸಾವಿರ ರೂಪಾಯಿ ನಗದು, ಒಂದು ಕಾರು ಹಾಗೂ ಒಂದು ಆಕ್ಟೀವ್ ಹೊಂಡವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಿಟ್ಲದ ಒಕ್ಕೆತ್ತೂರು ಸುರಂಬಡ್ಕ ನಿವಾಸಿ ಮಹಮ್ಮದ್ ಅಶ್ರಫ್ ಬಂಧಿತ ಆರೋಪಿಯಾಗಿದ್ದಾರೆ. ಇನ್ನುಳಿದ ಒಕ್ಕೆತ್ತೂರು ನಿವಾಸಿ ಝರೀನಾ ಹಾಗೂ ಮಹಮ್ಮದ್ ಇರ್ಷಾದ್ ಎಂಬವರು ತಲೆಮರೆಸಿಕೊಂಡಿದ್ದು, ಅವರ ಪತ್ತೆ ವಿಟ್ಲ ಪೊಲೀಸರು ಬಲೆ ಬೀಸಿದ್ದಾರೆ.

ಡಿಸೆಂಬರ್ ಉಕ್ಕುಡ ನಿವಾಸಿ ಮಹಮ್ಮದ್ ಅವರ ಮನೆಯವರು ತಮ್ಮ ಚಿನ್ನಾಭರಣಗಳನ್ನು ಮನೆಯ ಅಕ್ಕಿ ಡಬ್ಬದಲ್ಲಿ ಅಡಗಿಸಿ ಇಟ್ಟು ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದರು. ಈ ಮನೆಯವರ ಸಂಬಂಧಿಯೊಬ್ಬರ ಮಾಹಿತಿ ಮೇರೆಗೆ ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿದ ಇಬ್ಬರು ಕಳ್ಳರು ಮನೆಯಲ್ಲಿದ್ದ ಸುಮಾರು 44 ಪವನ್ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಿದ ವಿಟ್ಲ ಪೊಲೀಸರು ಬಂಟ್ವಾಳ ವೃತ್ತ ನಿರೀಕ್ಷಕ ಪ್ರಕಾಶ್, ವಿಟ್ಲ ಎಸೈ ನಾಗರಾಜ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related posts

Leave a Reply