Header Ads
Breaking News

ವಿಟ್ಲದ ಜೇಸಿಐ ಇಂಡಿಯಾ ವತಿಯಿಂದ ನಡೆದ ಬಹು ಘಟಕ ಸಮ್ಮಿಲನ ಕಾರ್ಯಕ್ರಮ

ಜೇಸಿಐ ಇಂಡಿಯಾ ವತಿಯಿಂದ ಬಹು ಘಟಕ ಸಮ್ಮಿಲನ ಕಾರ್ಯಕ್ರಮ ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.

ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಕೆ ಕವೀನ್ ಕುಮಾರ್ ಮಾತನಾಡಿ ಜೇಸಿಐ ಸಂಸ್ಥೆ ರಾಷ್ಟ ಮಟ್ಟದಲ್ಲಿಯೇ ಉತ್ತಮ ಹೆಸರುಗಳಿಸಿದೆ. ಸಮಾಜ ಸೇವೆ ಕಾರ್ಯಗಳನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಜೇಸಿಐನಿಂದ ನಾಯಕತ್ವ ಗುಣವನ್ನು ಕಲಿಸುತ್ತದೆ ಎಂದರು.

ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಮಾತನಾಡಿ ವಿಟ್ಲ ಜೇಸಿಐ ಉತ್ತಮ ಸಮಾಜ ಕಾರ್ಯ ನಡೆಸಿಕೊಂಡು ಬರುತ್ತಿದೆ. ಮುಂದಿನ ದಿನ ರಾಷ್ಟ್ರೀಯ ಅಧ್ಯಕ್ಷರು ಭೇಟಿ ನೀಡಲಿದ್ದಾರೆ. ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.

ಜೇಸಿಐ ಅಧ್ಯಕ್ಷ ದಿನೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದ ಮೊದಲು ರಾಷ್ಟ್ರೀಯ ಉಪಾಧ್ಯಕ್ಷರನ್ನು ಬೊಬ್ಬೆಕೇರಿ ಗಜಾನನ ಸಭಾಭವನದಲ್ಲಿ ಸ್ವಾಗತಿಸಲಾಯಿತು. ಬಳಿಕ ತೆರೆದ ವಾಹನದಲ್ಲಿ ವಿಟ್ಲ ಪೇಟೆಯಲ್ಲಿ ಮೆರವಣಿಗೆ ಮೂಲಕ ಕರೆ ತರಲಾಯಿತು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಉಪಾಧ್ಯಕ್ಷ ಕೆ ಕವೀನ್ ಕುಮಾರ್ ಹಾಗೂ ಬಾಬು ಕೆ.ವಿ ಅವರನ್ನು ಸನ್ಮಾನಿಸಲಾಯಿತು.

ಜೇಸಿಐನ ಅಶೋಕ್ ಚೂಂತಾರು, ಪ್ರದೀಪ್ ಬಾಕಿಲ, ವಲಯ ಉಪಾಧ್ಯಕ್ಷ ಮೇಧಾವಿ, ಲೋಕೇಶ್, ಅಬ್ದುಲ್ ಜಬ್ಬಾರ್ ಸಾಹೇಬ್, ರಾಯನ್ ಉದಯ ಕ್ರಾಸ್ತಾ, ಜೇಸಿಐ ಸೆನೆಟರ್ ಬಾಬು ಕೆ.ವಿ, ಜೈ ಕಿಶನ್, ಐಪಿಪಿ ಬಾಲಕೃಷ್ಣ , ಕಾರ್ಯದರ್ಶಿ ಆರ್ಥಿಕ್ , ಕಾರ್ಯಕ್ರಮದ ನಿರ್ದೇಶಕ ಮನೋಜ್ ರೈ, ಜೇಸಿರೇಟ್ ಅಶ್ವಿನಿ ದಿನೇಶ್ ಶೆಟ್ಟಿ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *