Header Ads
Header Ads
Breaking News

ವಿಟ್ಲ-ಕಬಕ ಹೆದ್ದಾರಿಯ ಅವ್ಯವಸ್ಥೆ : ಅಪಾಯಕಾರಿ ಹೊಂಡಗಳಿಗೆ ಮುಕ್ತಿ ನೀಡಿದ ಫ್ರೆಂಡ್ಸ್ ಕ್ಲಬ್

ವಿಟ್ಲ: ಅಪಾಯಕಾರಿ ಹೊಂಡಗಳಿಂದ ಹಲವು ಅಪಘಾತಗಳಿಗೆ ಕಾರಣವಾಗಿದ್ದ ವಿಟ್ಲ-ಕಬಕ ಹೆದ್ದಾರಿಯ ಕಂಬಳಬೆಟ್ಟು ಎಂಬಲ್ಲಿ ಹೊಂಡಗಳನ್ನು ಧರ್ಮನಗರ ಫ್ರೆಂಡ್ಸ್ ಕ್ಲಬ್ ವತಿಯಿಂದ ಶ್ರಮದಾನಗಳ ಮೂಲಕ ಮುಚ್ಚಲಾಯಿತು. ವಿಟ್ಲ ಪುತ್ತೂರು ರಸ್ತೆಯ ವಿಟ್ಲದಿಂದ ಕಂಬಳಬೆಟ್ಟು ವರೆಗೆ ರಸ್ತೆಗಳು ಹೊಂಡಗಳಿಂದ ಅಫಘಾತಕ್ಕೆ ಆಹ್ವಾನ ನೀಡುತ್ತಿತ್ತು. ವರ್ಷದ ಹಿಂದೆ ಕಂಬಳಬೆಟ್ಟು ಎಂಬಲ್ಲಿ ಹೊಂಡಕ್ಕೆ ಬೈಕ್‌ನ ಚಕ್ರ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಇದೇ ರೀತಿಯ ಹಲವು ಅಪಘಾತಗಳು ಸಂಭವಿಸಿ ಸಾವು ನೋವು ಸಂಭವಿಸಿತ್ತು. ಕಳೆದ ವರ್ಷ ವಿಟ್ಲ- ಕಂಬಳಬೆಟ್ಟು ಹೆದ್ದಾರಿ ಕಾಮಗಾರಿಗೆ ಇಲಾಖೆ ಮುಂದಾಗಿತ್ತು. ಬಳಿಕ ಗುತ್ತಿಗೆದಾರ ಕಾಮಗಾರಿ ದಿಢೀರನೆ ಸ್ಥಗಿತಗೊಳಿಸಿ ನಾಪತ್ತೆಯಾಗಿದ್ದರು. ಅರ್ಧಂಬರ್ಧ ಕಾಮಗಾರಿ ನಡೆಸಿದ ಪರಿಣಾಮ ಚರಂಡಿಯಲ್ಲಿ ಮಣ್ಣು ತುಂಬಿ ಮುಚ್ಚಿ ಹೋಗಿತ್ತು. ಇದರಿಂದ ರಸ್ತೆಯಲ್ಲಿ ಹೊಂಡಗಳು ನಿರ್ಮಾಣಗೊಂಡಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ದರು. ಇಲಾಖೆ ಕ್ಯಾರೇ ಅನ್ನಿಲ್ಲ. ಇದರಿಂದ ಸ್ವತಃ ಕಂಬಳಬೆಟ್ಟು ಧರ್ಮನಗರ ಫ್ರೆಂಡ್ಸ್ ಕ್ಲಬ್ ಸದಸ್ಯರು ಹಾಗೂ ಮಳೆಯನ್ನು ಲೆಕ್ಕಿಸದೇ ಹೊಂಡಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

Related posts

Leave a Reply

Your email address will not be published. Required fields are marked *