Header Ads
Header Ads
Breaking News

ವಿಟ್ಲ ಪ.ಪಂ.ಆಡಳಿತದ ಮೇಲೆ ಸುಳ್ಳು ಆರೋಪ:ಅರುಣ್ ಎಂ.ವಿಟ್ಲ ಹೇಳಿಕೆ

ವಿಟ್ಲ: ವಿಟ್ಲ ಪಟ್ಟಣ ವ್ಯಾಪ್ತಿಯ ಯಾವುದೇ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿಲ್ಲ. ಬಿಜೆಪಿಯ 12 ಮಂದಿ ಸದಸ್ಯರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದು, ಯಾರೂ ಭ್ರಷ್ಟಾಚಾರ ಮಾಡಿಲ್ಲ. ಬೇರೆಯವರ ಆಮಿಷ ರೂಪದ ಚಾ ಕುಡಿಯಲಿಲ್ಲ. ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್ ಅವರ ಆರೋಪದಲ್ಲಿ ಹುರುಳಿಲ್ಲ. ವಿಟ್ಲ ಪ.ಪಂ.ಆಡಳಿತದ ಮೇಲೆ ಪದೇ ಪದೇ ಸುಳ್ಳು ಆರೋಪ ಹೊರಿಸಲಾಗುತ್ತಿದೆ ಎಂದು ವಿಟ್ಲ ಪ.ಪಂ. ಅಧ್ಯಕ್ಷ ಅರುಣ್ ಎಂ.ವಿಟ್ಲ ಹೇಳಿದರು.

ಅವರು ವಿಟ್ಲ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಡ್ಡದ ಬೀದಿ ರಸ್ತೆ ಬದಿಯ ಚರಂಡಿ ಕಾಮಗಾರಿ ಪ.ಪಂ.ನಿಧಿಯಿಂದ ಕೈಗೆತ್ತಿಕೊಳ್ಳಲಾಗಿದೆ ಹೊರತು ಅವರು ಹೇಳಿದಂತೆ ನಗರೋತ್ಥಾನ ಅನುದಾನದಿಂದಲ್ಲ. ಆ ಕಾಮಗಾರಿ ಕಳಪೆಯಾಗಿಲ್ಲ. ಎಂ ಸ್ಯಾಂಡ್ ಬಳಸಲು ಸರಕಾರ ಮಾನ್ಯತೆ ನೀಡಿದೆ. ಮತ್ತೆ ಇವರ ಆರೋಪಕ್ಕೆ ಬೆಲೆ ಇದೆಯೇ ? ಎಂದು ಅವರು ಪ್ರಶ್ನಿಸಿದ್ದಾರೆ.
ಜಿಲ್ಲೆಯಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಸಿದವರು ಅಶ್ರಫ್ ಪಕ್ಷದ ನಾಯಕರೇ! ವೃಥಾ ಆರೋಪ ಮಾಡುವ ಬದಲಾಗಿ ಜನಸಾಮಾನ್ಯರಿಗೆ ನ್ಯಾಯಯುತ ಬೆಲೆಯಲ್ಲಿ ಮರಳು ದೊರಕುವಂತೆ ಮಾಡಿಸಲಿ. ಕಾಮಗಾರಿ ಕಳಪೆಯಾಗಿದೆಯೇ ಎಂದು ಪರೀಕ್ಷಿಸಲು ಪ.ಪಂ.ಎಂಜಿನಿಯರ್ ಕ್ರಮಕೈಗೊಳ್ಳುತ್ತಾರೆ. ಕ್ರಶರ್ ಹುಡಿಯನ್ನು ನೀರಿನಲ್ಲಿ ತೊಳೆದು ಎಂ ಸ್ಯಾಂಡ್ ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ.ಪಂ.ಉಪಾಧ್ಯಕ್ಷ ಜಯಂತ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಚಂದ್ರಕಾಂತಿ ಶೆಟ್ಟಿ, ಸದಸ್ಯರಾದ ವಿ.ರಾಮದಾಸ ಶೆಣೈ, ಲೋಕನಾಥ ಶೆಟ್ಟಿ ಕೊಲ್ಯ, ಶ್ರೀಕೃಷ್ಣ ವಿಟ್ಲ ಉಪಸ್ಥಿತರಿದ್ದರು

 

Related posts

Leave a Reply