

ವಿಟ್ಲ: ಇತಿಹಾಸ ಪ್ರಸಿದ್ಧ ವಿಟ್ಲ ಅರಮನೆಯ ಆಡಳಿತಕ್ಕೊಳಪಟ್ಟ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಪ್ರಧಾನ ದೈವ ಶ್ರೀ ಮುಂಡಾಲತ್ತಾಯ ದೈವದ ಮೂಲಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ನಡೆಯಿತು.
ಆಲಂಪಾಡಿ ಬ್ರಹ್ಮಶ್ರೀ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಿತು.
ಡಿ 31 ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಶ್ರೀ ದೈವದ ಭಂಡಾರವನ್ನು ಮೂಲಸ್ಥಾನಕ್ಕೆ ತೆಗೆದುಕೊಂಡು ಹೋಗುವ ದೈವಿ ಕಾರ್ಯ ನಡೆಯಿತು.
ಜ.1ರಂದು ಬೆಳಿಗ್ಗೆ 10 ಗಂಟೆಗೆ ಮುಂಡಾಲತ್ತಾಯ ದೈವದ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವ ಮತ್ತು ಮಧ್ಯಾಹ್ನ ಶ್ರೀ ದೈವದ ನೇಮೋತ್ಸವ ನೆರವೇರಿತು.
ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಾಲಯದ ಪ್ರಧಾನ ದೈವ ಆಗಿರುವ ಮುಂಡಾಲತ್ತಾಯ ದೈವದ ಮೂಲಸ್ಥಾನ ಶತಮಾನಗಳಿಂದ ಸಂಪೂರ್ಣವಾಗಿ ನಶಿಸಿ ಹೋಗಿ ಅಜೀರ್ಣಾವಸ್ಥೆಯಲ್ಲಿತ್ತು.ವರ್ಷಗಳ ಹಿಂದೆ ಪ್ರಶ್ನಾಚಿಂತನೆಯಲ್ಲಿ ಕಂಡು ಬಂದಂತೆ ದೈವಸ್ಥಾನದ ಮೂಲಸ್ಥಾನದಲ್ಲಿಯೇ ನೂತನವಾದ ದೈವದ ಗುಡಿಯನ್ನು ನಿರ್ಮಿಸಲು ತೀರ್ಮಾನಿಸಲಾಯಿತು. ಈ ದೈವದ ಜೀರ್ಣೋದ್ಧಾರ ಮಾಡುವಲ್ಲಿ ವಿಟ್ಲದ ಸಮಸ್ತ ಭಕ್ತರೆಲ್ಲರೂ ಕೈ ಜೋಡಿಸಿದ್ದು, ಕೇವಲ 48 ದಿನಗಳಲ್ಲಿ ದೈವಸ್ಥಾನದ ನಿರ್ಮಾಣ ದ ಸಂಕಲ್ಪ ನೆರವೇರಿ ಬ್ರಹ್ಮಕಲಶೋತ್ಸವ ನಡೆಯಿತು.
ಬಂಗಾರು ಅರಸರು, ಸಮಿತಿ ಗೌರವಾಧ್ಯಕ್ಷ ಜಗನ್ನಾಥ್ ಸಾಲ್ಯಾನ್, ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ, ಕೃಷ್ಣಯ್ಯ ಕೆ, ಅಧ್ಯಕ್ಷ ಕೀರ್ತನ್ ಕೆದಿಲಾಯ ಗುರುಂಪು, ಕಾರ್ಯಾಧ್ಯಕ್ಷ ಬಾಬು ಕೆ.ವಿ, ಉಪಾಧ್ಯಕ್ಷ ಹರೀಸ್ ವಿ.ಆರ್, ಹರೀಶ್ ಪೂಜಾರಿ, ನರ್ಸಪ್ಪ ಪೂಜಾರಿ, ಮಂಜುನಾಥ ಎಸ್, ಸಂಜೀವ ಪೂಜಾರಿ ಎನ್, ರಾಜೇಶ್ ವಿಟ್ಲ, ರವಿಚಂದ್ರ, ಜಗದೀಶ ಪಾಣೆಮಜಲು, ಪದ್ಮನಾಭ, ವಸಂತ ಗೌಡ, ಪದ್ಮನಾಭ ಗೌಡ, ಲಿಂಗಪ್ಪ ಗೌಡ, ನಾರಾಯಣ ಗೌಡ, ಮೋಹನ್ ಗೌಡ ದೇವಸ್ಯ, ಲಿಂಗಪ್ಪ ಗೌಡ ದೇವಸ್ಯ ಮೊದಲಾದವರು ಉಪಸ್ಥಿತರಿದ್ದರು.