Header Ads
Breaking News

ವಿಟ್ಲ ಸಂತೆಗೂ ತಟ್ಟಿದ ಕೊರೊನಾ ವೈರಸ್ ಭೀತಿ : ವಾರದ ಸಂತೆ ತಾತ್ಕಾಲಿಕವಾಗಿ ಮುಂದೂಡಿಕೆ

ಸಾರ್ವಜನಿಕರ ಆರೋಗ್ಯ ಹಿತದೃಷ್ಠಿಯಿಂದ ರಾಜ್ಯ ಸರ್ಕಾರ ಹಾಗೂ ದ.ಕ ಜಿಲ್ಲಾಧಿಕಾರಿಗಳ ಆದೇಶ ಪ್ರಕಾರ ಕೋರೋನ ವೈರಸ್ ಭೀತಿಯಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ವಿಟ್ಲ ಪೇಟೆಯಲ್ಲಿ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ವಿಟ್ಲ ಪಟ್ಟಣ ಪಂಚಾಯಿತಿ ಸೂಚನೆ ನೀಡಿತ್ತು.

ಅದರಂತೆ ವಿಟ್ಲ ಪೇಟೆಗೆ ಯಾರೂ ಸಂತೆ ವ್ಯಾಪಾರಿಗಳು ಆಗಮಿಸಿಲ್ಲ. ಸಂತೆಗೆ ಪುತ್ತೂರು, ಉಪ್ಪಿನಂಗಡಿ, ನೆಲ್ಯಾಡಿ, ಹಾಸನ, ಬಂಟ್ವಾಳ ಮೊದಲಾದ ಕಡೆಗಳಿಂದ ನೂರಾರು ವ್ಯಾಪಾರಿಗಳು ಆಗಮಿಸುತ್ತಿದ್ದರು. ವಿಟ್ಲ ಸಂತೆ ದಿನ ವಿಟ್ಲ ಪೇಟೆ ಜನ ಸಂದಣೆಯಿಂದ ಇರುತ್ತಿದ್ದು, ವಾಹನ ದಟ್ಟಣೆಗೆ ಕಾರಣವಾಗುತ್ತಿತ್ತು. ಪಂಚಾಯಿತಿ ಖಡಕ್ ಸೂಚನೆ ನೀಡಿದ್ದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ಕೂಡ ಆಗಮಿಸಿಲ್ಲ.

ರಸ್ತೆ ಬದಿಯಲ್ಲಿ ತಿಂಡಿ ತಿನ್ನಿಸುಗಳ ವ್ಯಾಪರಗಳನ್ನು ಕೂಡಲೇ ನಿಲ್ಲಿಸುವುದು ಹಾಗೂ ಹೆಚ್ಚು ಜನಸಂದಾಣಿ ಸೇರುವ ಕಾರ್ಯಕ್ರಮಗಳನ್ನು ಈ ಕೂಡಲೇ ಸ್ಥಗಿತಗೊಳಿಸುವುದು ಎಂಬುದಾಗಿಯೂ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರು ಸೂಚಿಸಿದ್ದಾರೆ.

Related posts

Leave a Reply

Your email address will not be published. Required fields are marked *